You are here
Home > Koppal News > ಡಾ|| ಮಹೇಂದ್ರ ಕಿಂದ್ರೆ ದಂಪತಿಗಳಿಗೆ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರದಾನ.

ಡಾ|| ಮಹೇಂದ್ರ ಕಿಂದ್ರೆ ದಂಪತಿಗಳಿಗೆ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರದಾನ.

ಕೊಪ್ಪಳ,ಸೆ,೦೧ ಪ್ರತಿವರ್ಷ ಜಿಲ್ಲಾ ಉತ್ಸವದಲ್ಲಿ ಕೊಡಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಡಾ.ಮಹೇಂದ್ರ ಕಿಂದ್ರೆ ದಂಪತಿಗಳ ಅವರಿಗೆ  ಇತ್ತಿಚಿಗೆ ಸಾಹಿತ್ಯ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಗೌರವಿಸಲಾಯಿತು. ಡಾ.ಮಹೇಂದ್ರ ಕಿಂದ್ರೆರವರು ಕಳೆದ ಸುಮಾರು ವರ್ಷಗಳಿಂದ   ವೈದ್ಯಕೀಯ ಸೇವೆಸಲ್ಲಿಸುತ್ತಿದ್ದು ಇವರ ಸೇವೆಯನ್ನು ಗುರುತಿಸಿ  ಹಾಗೂ ಕೊಪ್ಪಳ ನಗರದಲ್ಲಿ ಪ್ರಪ್ರಥಮ ಬಾರಿಗೆ ಕೊರ್ಲಹಳ್ಳಿ ಮತ್ತಿತರರು ಸೇರಿ ಸುಸಜ್ಜಿತವಾದ  ಮಲ್ಟಿ ಸ್ಪೇಷಾಲಿಟಿ ಎಲ್ಲಾ ಸೌಕರ್ಯ ಹೊಂದಿರುವ ಖುಷಿ ಆಸ್ಪತ್ರೆ ಪ್ರಾರಂಭಸಿರುವುದು ಇಲ್ಲಿಯ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ  ಎಲ್ಲಾ ೭ ದಿನದ

೨೪ ತಾಸು ಸೇವೆ ಸಾರ್ವಜನಿಕರಿಗೆ ಲಭ್ಯವಿರುವುದು ಅತೀವ ಸಂತೋಷವನ್ನುಂಟುಮಾಡಿದೆ ಈ ಎಲ್ಲಾ ಅಂಶವನ್ನು ಪರಿಗಣಿಸಿ ಖುಷಿ ಆಸ್ಪತ್ರೆ ಸಂಸ್ಥೆಗೆ ಕೊಪ್ಪಳ ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಭವನದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು  ಡಾ.ಮಹೇಂದ್ರ ಕಿಂದ್ರೆ ಎಂ.ಡಿ ಮತ್ತು ಅವರ ಧರ್ಮಪತ್ನಿ ಶೈಲಾಶ್ರೀ ಎಂ.ಕಿಂದ್ರೆ ಬಿ.ಇ. ದಂಪತಿಗಳಿಗೆ ನೀಡಿ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಗಿರಿಜಾ ಶಂಕರ್ ಪಾಟೀಲ್, ರವರು  ಸಮಾರೋಪ ಭಾಷಣಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಸಿದ್ದಪ್ಪ ಹಂಚಿನಾಳ ವಹಸಿದ್ದರು. ಸಯ್ಯದ್ ಫೌಂಡೇಶನ್ಸ್ ಅಧ್ಯಕ್ಷ ಕೆ.ಎಂ.ಸಯ್ಯದ್, ವಾಣಿಜ್ಯೋಧ್ಯಮಿ ಪ್ರಭು ಹೆಬ್ಬಾಳ, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶಕುಂತಲಾ ಹುಡೇಜಾಲಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಇಂದಿರಾ ಬಾವಿಕಟ್ಟಿ, ಕೋಮಲಾ ಕುದರಿಮೋತಿ, ಜಿ.ಎಸ್.ಗೋನಾಳ,  ಎಂ.ಸಾದಿಕ್ ಅಲಿ, ಮಾರುತಿರಾವ್ ಸುರ್ವೆ, ಎನ್.ಎಂ.ದೊಡ್ಡಮನಿ, ಹರೀಶ್ ಹೆಚ್.ಎಸ್.ಸಂಘಟಕ ಮಹೇಶ್‌ಬಾಬು ಸುರ್ವೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Top