fbpx

ಜು.೧೭, ಬೀದಿ ನಾಟಕ ಕಲಾವಿದರ ಕಾರ್ಯಾಗಾರ

ಕೊಪ್ಪಳ ಜುಲೈ ೧೫: ನಗರದ ವಾರ್ತಾ ಭವನದಲ್ಲಿ ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ಬೀದಿ ನಾಟಕ ಕಲಾವಿದರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದ ಉದ್ಘಾಟನೆಯನ್ನು ಜು. ೧೭ ರವಿವಾರ ಬೆಳಿಗ್ಗೆ ೧೦ ಗಂಟೆಗೆ ಹೇಮಂತಕುಮಾರ ದೊಡ್ಡಮನಿ ನೆರವೇರಿಸುವರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಉದಯ ಟಿವಿ ಜಿಲ್ಲಾ ವರದಿಗಾರ ನಾಗರಾಜ ಸುಣಗಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಉದ್ಯಮಿ ಮಲ್ಲಿಕಾರ್ಜುನ ಹಿರೇಮಠ ಹಾಗೂ ನೀನಾಸಂ ಪದವೀಧರ ಹೇಮರಾಜ ವೀರಾಪುರ ಪಾಲ್ಗೊಳ್ಳುವರು
ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರದಲ್ಲಿ ಸಮಾಜದ ಜ್ವಲಂತ ಪಿಡುಗುಗಳಾದ ವರದಕ್ಷಿಣೆ, ಬಾಲ ಕಾರ್ಮಿಕ ಪದ್ದತಿ, ದೇವದಾಸಿ ಪದ್ದತಿ, ಬಾಲ್ಯ ವಿವಾಹ, ಅನಕ್ಷರತೆ, ಬಡತನ, ಅಶ್ಪೃಸ್ಯತೆ ನಿಮೂಲನೆ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಕಲಾವಿದರಿಗೆ ತರಬೇತಿ ನೀಡಲಾಗುವುದು ಎಂದು ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ವೈ. ಬಿ. ಜೂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!