ಶ್ರೀರಾಮುಲುಗೆ ಸೀಲಿಂಗ್ ಫ್ಯಾನ್

ಬಳ್ಳಾರಿ, ನ.: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಬಿ. ಶ್ರೀರಾಮುಲುಗೆ ಚುನಾವಣಾ ಆಯೋಗವು ‘ಸೀಲಿಂಗ್ ಫ್ಯಾನ್’ ಚಿಹ್ನೆಯನ್ನು ನೀಡಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್, ಟಿವಿ, ಗ್ಯಾಸ್ ಸಿಲಿಂಡರ್ ಹಾಗೂ ಸೀಲಿಂಗ್ ಫ್ಯಾನ್ ಈ ಮೂರು ಚಿಹ್ನೆಗಳಲ್ಲಿ ಯಾವುದಾದರೊಂದು ಚಿಹ್ನೆಯನ್ನು ಪಡೆಯುವ ಅವಕಾಶವನ್ನು ಶ್ರೀರಾಮುಲುಗೆ ನೀಡಲಾಗಿತ್ತು. ಅವರ ಅಪೇಕ್ಷೆಯಂತೆ ‘ಸೀಲಿಂಗ್ ಫ್ಯಾನ್’ ಚಿಹ್ನೆಯನ್ನು ನೀಡಲಾಗಿದೆ ಎಂದರು.
ಒಟ್ಟು 20 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಬಿಜೆಪಿಯ ಅಶೋಕ್ ಕುಮಾರ್ ಹಾಗೂ ನಾಗೇಂದ್ರ ಸೇರಿದಂತೆ ಒಟ್ಟು 8 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡಿವೆ. 4 ಮಂದಿ ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡಿದ್ದಾರೆ. ಇದೀಗ ಅಂತಿಮವಾಗಿ ಕಣದಲ್ಲಿ ಒಟ್ಟು 8 ಜನ ಸ್ಪರ್ಧಿಗಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ನ.30ರಂದು ನಡೆಯಲಿರುವ ಮತದಾನಕ್ಕೆ ಆಯೋಗವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.
ಪ್ರಮುಖ ಅಭ್ಯರ್ಥಿಗಳು
ಗಾದಿಲಿಂಗಪ್ಪ (ಬಿಜೆಪಿ) ಮತ್ತು ರಾಮ್‌ಪ್ರಸಾದ್ (ಕಾಂಗ್ರೆಸ್), ಬಿ.ಶ್ರೀರಾಮುಲು ಸಹಿತ ಆರು ಮಂದಿ ಪಕ್ಷೇತರ ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ.
ಶ್ರೀರಾಮುಲುಗೆ ತಂಗಾಳಿಬಳ್ಳಾರಿ, ನ.15: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಬಿ.ಶ್ರೀರಾಮುಲುಗೆ ಚುನಾವಣಾ ಆಯೋಗವು ಸೀಲಿಂಗ್ ಫ್ಯಾನ್ ಚಿಹ್ನೆಯನ್ನು ನೀಡಿರುವುದು ಸಂತಸ ತಂದಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗವು ತನಗೆ ಕೆಲವು ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಅವುಗಳ ಪೈಕಿ ಸೀಲಿಂಗ್ ಫ್ಯಾನನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.
ಇಂದಿನಿಂದಲೇ ಚಿಹ್ನೆಯನ್ನು ಬಳಸಿಕೊಂಡು ಮತದಾರರಿಗೆ ಸೀಲಿಂಗ್ ಫ್ಯಾನ್ ಚಿಹ್ನೆಗೆ ಮತ ನೀಡುವಂತೆ ಕೋರಿ ಪ್ರಚಾರ ಕೈಗೊಳ್ಳುತ್ತೇನೆ. ಕ್ಷೇತ್ರದ ಮತದಾರರು ತನ್ನೊಂದಿಗಿದ್ದಾರೆ. ಅವರು ಎಂದಿಗೂ ತನ್ನ ಕೈ ಬಿಡುವುದಿಲ್ಲ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಶ್ರೀರಾಮುಲುಗೆ ಚುನಾವಣಾ ಆಯೋಗವು ಚಿಹ್ನೆ ನೀಡಿದ ಸುದ್ದಿ ತಿಳಿದು, ಜನಾರ್ದನ ರೆಡ್ಡಿಯವರ ನಿವಾಸ ‘ಕುಟೀರ’ದಲ್ಲಿ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ರಾಜ್ಯಕ್ಕೆ ಕಾಲಿಡಲಿದೆಯೇ ವೈಎಸ್ಸಾರ್ ಕಾಂಗ್ರೆಸ್?
ಬಳ್ಳಾರಿ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ‘ ಸೀಲಿಂಗ್ ಫ್ಯಾನ್’ ಚಿಹ್ನೆಯಡಿಯಲ್ಲಿ ಸ್ಪರ್ಧಿಸುವ ಮೂಲಕ ಕರ್ನಾಟಕದಲ್ಲಿ ವೈಎಸ್ಸಾರ್ ಕಾಂಗ್ರೆಸ್ ಕಾಲಿಡಲಿದೆಯೇ?, ಕಡಪ ಸಂಸದ ಜಗನ್ಮೋಹನ್ ರೆಡ್ಡಿಯವರ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಚಿಹ್ನೆಯೂ ಸೀಲಿಂಗ್ ಫ್ಯಾನ್ ಆಗಿರುವುದು ಜನತೆಯಲ್ಲಿ ಅನುಮಾನ ಮೂಡಲು ಕಾರಣವಾಗಿದೆ
Please follow and like us:
error

Related posts

Leave a Comment