ಜಿ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ : ಸೂಚನೆ

 ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಕುರಿತಂತೆ ಇದೇ ಫೆ. ೨೨ ರಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಶೇಷ ಸಭೆ ಕರೆಯಲಾಗಿದ್ದು, ಪತ್ರಿಕಾ ಪ್ರಕಟಣೆಯನ್ನೇ ಸಭೆಯ ನೋಟೀಸ್ ಎಂದು ಪರಿಗಣಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಅವರು   ಸೂಚನೆ  ನೀಡಿದ್ದಾರೆ.
  ಇದೇ ಫೆ. ೨೨ ರಂದು ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಶೇಷ ಸಭೆ ಕರೆಯಲಾಗಿದ್ದು, ಈ ಸಭೆಯ ನೋಟೀಸನ್ನು ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಚುನಾಯಿತ ಜಿಲ್ಲಾ ಪಂಚಾಯತಿ ಸದಸ್ಯರಿಗೆ ನೋಟೀಸ್ ತಲುಪಿಸಲು ತಿಳಿಸಲಾಗಿತ್ತು.  ಆದರೆ ಕೊಪ್ಪಳ ಜಿಲ್ಲಾ ಪಂಚಾಯತಿಯ ಕೆಲವು ಸದಸ್ಯರು ನೋಟೀಸ್ ಪಟೆಯದೆ ಹಾಗೂ ಅವರ ಮನೆಯ ಬಾಗಿಲಿಗೆ ನೋಟೀಸನ್ನು ಅಂಟಿಸಲು ಹಾಗೂ ಛಾಯಾ ಚಿತ್ರ ತೆಗೆಯಲು  ಮತ್ತು ಮಹಜರ ಮಾಡಲು ಅವಕಾಶ ನೀಡದೇ ಇರುವುದರಿಂದ ಮತ ಯಾಚನೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ.  ಆದ್ದರಿಂದ ಈ ಪ್ರಕಟಣೆಯನ್ನೆ ಅವಿಶ್ವಾಸ ಗೊತ್ತುವಳಿ ಸಭೆಯ ನೋಟೀಸ್ ಎಂದು ಪರಿಗಣಿಸಿ ಫೆ. ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತಿಯ ಎಲ್ಲಾ ಸದಸ್ಯರು ಈ ಸಭೆಗೆ ಖುದ್ದು ಹಾಜರಾಗುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಅವರು  ಕೋರಿದ್ದಾರೆ.
Please follow and like us:
error