ಜೆಡಿಎಸ್ ಗೆ ಅನ್ಸಾರಿ-ಭೂಮರೆಡ್ಡಿ ಆಗಮನದಿಂದ ಆನೆಬಲ

ಕೊಪ್ಪಳ,  ಅ. ೧೫. ಮಾಜಿ ಸಚಿವ, ಗಂಗಾವತಿಯ ಅಭಿವೃದ್ಧಿಯ ಹರಿಕಾರ ಇಕ್ಬಾಲ್ ಅನ್ಸಾರಿ ಆಗಮನದಿಂದ ಜೆಡಿಎಸ್ ಗೆ ಆನೆಬಲ ಬಂದಿದೆ ಎಂದು ಜೆಡಿಎಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಹೇಳಿದ್ದಾರೆ.

ಜೆ.ಡಿ.ಎಸ್. ಪಕ್ಷ ಅಧಿಕಾರಕ್ಕೆ ಬರುವದು ಶತಸಿದ್ದ ಉತ್ತರ ಕರ್ನಾಟಕದಲ್ಲೂ ಸಹ ಪಕ್ಷ ಈ ಭಾರಿ ಉತ್ತಮ ಸಾಧನೆ ಮಾಡಲಿದೆ, ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಇಕ್ಬಾಲ್ ಅನ್ಸಾರಿ ಮಾಡಿದ ಸಾಧನೆಯನ್ನು ಮುಂದಿನ ಇಪ್ಪತ್ತು ವರ್ಷ ಯಾವುದೇ ಸರಕಾರ, ಶಾಸಕ ಮಾಡಲು ಸಾಧ್ಯವಿಲ್ಲ, ಜಾತಿ, ಮತ, ಧರ್ಮವನ್ನು ಮೀರಿ ನಿಂತಿರುವ ನಾಯಕ ಅನ್ಸಾರಿಯನ್ನು ಮತ್ತೆ ಕರೆತಂದಿರುವದು ಜಿಲ್ಲೆ ಹಾಗೂ ಉತ್ತರ ಕರ್ನಾಟಕದಲ್ಲಿ ಪಕ್ಷ ಬಲಗೊಳ್ಳಲಿರುವದಕ್ಕೆ ಸಾಕ್ಷಿ. ಅದೇ ರೀತಿ ಸರ್ವಜಾತಿಯನ್ನು ಕೂಡಿಕೊಂಡು ಬಾಳುತ್ತಿರುವ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಣ್ಣರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ ಮತ್ತು ಹೈ.ಕ. ಅಧ್ಯಕ್ಷ ಮಾಜಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಜನಾನುರಾಗಿ ನಾರಾ ಸೂರ್ಯನಾರಾಯಣ ರೆಡ್ಡಿಯವರ ನೇತೃತ್ವದಲ್ಲಿ ಪಕ್ಷ ಸೇರಲಿದ್ದಾರೆ, ಕೊಪ್ಪಳಕ್ಕೆ ಶಾಸಕರಾಗುವ ಎಲ್ಲಾ ರೀತಿಯ ಅರ್ಹತೆ ಹೊಂದಿರುವ ಅವರು ಪಕ್ಷವನ್ನು ವೇಗವಾಗಿ ಬೆಳಸಲಿದ್ದಾರೆ, ಜೆಡಿಎಸ್ ನಲ್ಲಿದ್ದ ಅನೇಕರನ್ನು ಮರಳಿ ಪಕ್ಷಕ್ಕೆ ಹಾಗೂ ಅನೇಕ ಹೊಸಬರನ್ನು ಸೇರಿಸಿಕೊಳ್ಳುವ ಕಾರ್ಯ ಶೀಘ್ರವೇ ನಡೆಯಲಿದೆ ಎಂದು ಮಂಜುನಾಥ ಜಿ. ಗೊಂಡಬಾಳ  ತಿಳಿಸಿದ್ದಾರೆ.
Please follow and like us:
error