ವಿವೇಕಾನಂದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕೊಪ್ಪಳ : ೧೫, ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವೈಭವಯುತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭು ಹೆಬ್ಬಾಳ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ ಕಟ್ಟಲು ಹಿರಿಯರು ಮಾಡಿದ ಶ್ರಮ ಸಾರ್ಥಕವಾದದ್ದು. ನಾವೀಗ ಅದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕೆಂಬ ಕರೆ ಕೊಟ್ಟರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲಯನ್ ವಿ.ಎಸ್. ಅಗಡಿ ಮಾತನಾಡಿ ಸ್ವಾತಂತ್ರ್ಯ ಸಿಕ್ಕಾಗ ತಾವು ೭ ವರ್ಷದವರಾಗಿದ್ದು, ಅಂದಿನ ದಿನಗಳನ್ನು ನೆನಪಿಸಿಕೊಂಡು, ದೇಶದ ಭದ್ರತೆ ಮತ್ತು ಹಿತರಕ್ಷಣೆ ಕುರಿತು ಮಾತನಾಡಿದರು.

ಶಿಕ್ಷಕರಾದ ಸಮೀರ ಜೋಶಿ ಮತ್ತು ಶ್ರೀಮತಿ ಫಿರೋಜಾ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಪ್ರಸ್ತುತ ದೇಶದ ಸಮಸ್ಯೆಗಳ ಕುರಿತಾಗಿ ಗಮನ ಸೆಳೆಯುವ ಮಾತುಗಳನ್ನಾಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಭಾಷಣವೂ ಸಭಿಕರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಎಲ್.ಕೆ.ಜಿ. ವಿದ್ಯಾರ್ಥಿಗಳಿದ ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಬಸವಣ್ಣ, ಝಾನ್ಸಿ ರಾಣಿ ಲಕ್ಷ್ಮೀ ಭಾಯಿ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ಮಹನೀಯರ ವೇಷ ಭೂಷಣ ಸ್ಪರ್ಧೆ ನಡೆಯಿತು. ಭಾಷಣ, ನಿಬಂಧ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯ ಮೇಲೆ ಲಯನ್ ಮಲ್ಲಿಕಾರ್ಜುನ ಬಳ್ಳೊಳ್ಳಿ, ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಮಹೇಶ ಮಿಟ್ಟಲಕೋಡ, ಲಯನ್ ಸುರೇಶ ಸಂಚೈತಿ, ಲಯನ್ ಅರವಿಂದ ಅಗಡಿ, ಲಯನ್ ಪರಮೇಶಪ್ಪ ಕೊಪ್ಪಳ, ಶಾಲಾ ಪ್ರಾಚಾರ್ಯ ಎ. ಧನಂಜಯನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ‘ಲಾಠಿ ಕವಾಯತು’ ನಡೆಯಿತು.
ಶಿಕ್ಷಕರಾದ ಸುನೀಲ್, ಶರಣಗೌಡ, ಸಮೀರ ಜೋಶಿ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಿದರೆ, ಪೂರ್ವಿ ಜೈನ್, ಉಮರ್, ಜ್ಯೋತಿ ಕೋರಿ, ಕಿರಣ ಕಾರ್ಯಕ್ರಮ ನಿರೂಪಿಸಿದರೆ, ಚಂದನ ಪ್ರಾರ್ಥಿಸಿದರು, ಪಾರ್ವತಿ ನಾಲ್ವಾಡ ವಂದಿಸಿದರು.
ತ್ಯಾಗ ಬಲಿದಾನಗಳ ಮೂಲಕ ಬಂದ ಈ ಸ್ವಾತಂತ್ರವನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕಾಗಿದೆ 
-ಎಸ್.ಎಲ್. ಮಾಲಿಪಾಟೀಲ

: ನಗರದ ಶ್ರೀ ಗವಿಸಿದ್ಧೇಶ್ವರ ಪದವಿಮಹಾವಿದ್ಯಾಲಯದಲ್ಲಿ ೬೭ ನೇ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ  ನಮ್ಮ ಮನಸ್ಸುಗಳು ವಿಶಾಲವಾಗಿದ್ದಾಗ ಮಾತ್ರ ನಾವು ನೆರೆಹೊರೆಯ  ಜನರೊಡನೆ  ಸೌಹಾರ್ಧಯುತವಾಗಿ ಬದುಕಲಿಕ್ಕೆ ಸಾಧ್ಯವಾಗುತ್ತದೆ.  ಆ ಮೂಲಕ  ಉತ್ತಮ ಸಂಬಂಧಗಳು ರೂಪಗೊಂಡು ಭಾರತ ಬಲಿಷ್ಠವಾಗಬಲ್ಲದು. ಎಷ್ಟೋ ತ್ಯಾಗ ಬಲಿದಾನಗಳ ಮೂಲಕ ಬಂದ ಈ ಸ್ವಾತಂತ್ರವನ್ನು ನಾವೆಲ್ಲರೂ ಉಳಿಸಿಕೊಂಡು  ಹೋಗಬೇಕಾಗಿದೆ ಎಂದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪರೀಕ್ಷಿತರಾಜ, ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್,  ಎನ್.ಸಿ.ಸಿ ಅಧಿಕಾರಿ ಡಾ.ದಯಾನಂದ ಸಾಂಳಕಿ, ಪದವಿ  ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ  ಶರಣಬಸಪ್ಪ ಬಿಳಿಯಲಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪಾರ ವಿದ್ಯಾರ್ಥಿಗಳು ಸಮಸ್ತ ಸಿಬ್ಬಂಧಿವರ್ಗ ಭಾಗವಹಿಸಿದ್ದರೆಂದು ಡಾ.ಪ್ರಕಾಶ ಬಳ್ಳಾರಿ ತಿಳಿಸಿದ್ದಾರೆ.

Leave a Reply