fbpx

ತಾಯಿ ಮತ್ತು ಗುರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ- ಎಂ.ಎ.ವಲೀಸಾಹೇಬ

ಕೊಪ್ಪಳ : ಗುರು ಇಲ್ಲದೇ ಗುರಿ ಸಾಧನೆ ಸಾಧ್ಯವಿಲ್ಲ. ಯಶಸ್ವಿ ಬದುಕಿಗೆ ಗುರಿ ಮತ್ತು ಗುರು ಎರಡೂ ಬೇಕು. ಮನೆಯಲ್ಲಿ ಮಗುವಿಗೆ ತಾಯಿಯೇ ಮೊದಲ ಗುರು. ಮಕ್ಕಳು ತಾಯಿಯನ್ನು ಮತ್ತು ಗುರುವನ್ನು ಗೌರವಿಸಬೇಕು. ಅವರ ಸೇವೆಯಲ್ಲಿ ತೊಡಗಬೇಕು.  ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಇವರಿಬ್ಬರ ಆಶೀರ್ವಾದ ಅಗತ್ಯ ಎಂದು ಅನ್ಮೋಲ ಟೈಂಸ್ ಸಂಪಾದಕ ಎಂ.ಎ.ವಲೀಸಾಹೇಬ ( ಹಕಿಂಸಾಹೇಬ್) ಹೇಳಿದರು.
ಅವರು ಕಿನ್ನಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೇವಾ ವಿದ್ಯಾಲಯದ ೧೦ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ಕಗ್ಗಲ್ಲನ್ನು ಕೆತ್ತಿ ಮೂರ್ತಿ ಮಾಡುವ ತಾಯಿ ಮತ್ತು ಗುರವಿನ ಪಾದದಡಿಯಲ್ಲಿ ಸ್ವರ್ಗವಿದೆ. ಇದನ್ನು ಅರಿತುಕೊಂಡು ವಿದ್ಯಾರ್ಥಿಗಳು ಬಾಳಬೇಕು. ಅಸಾಧ್ಯವಾದದನ್ನೂ ಸಾಧಿಸಲು ಸಾಧ್ಯ ಎಂದು ಹೇಳಿದರು.
 ಮುಖ್ಯ ಅತಿಥಿಗಳಾಗಿದ್ದ ಶರಣಪ್ಪ ಬಾಚಲಾಪೂರ ಮಾತನಾಡಿ ಈ ಅಧುನೀಕ ಯುಗದಲ್ಲಿ ಶಿಕ್ಷಣಕ್ಕಿರುವ ಮಹತ್ವದ ಬಗ್ಗೆ ಇಂದು ಎಲ್ಲರಿಗೂ ತಿಳಿದಿದೆ. ಸೇವಾ ವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯೆ ಕಲಿಸುವುದರ ಜೊತೆಗೆ ಶಿಸ್ತು ಸಂಯಮ ಮತ್ತು ಬದುಕಿಗೆ ಹಾದಿ ರೂಪಿಸಿಕೊಡುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಇನ್ನೊರ್ವ ಅತಿಥಿ ಜಿಲ್ಲಾ ಸರಕಾರಿ  ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣವರ ಮಾತನಾಡಿ ಮೌಲ್ಯಾಧಾರಿತ ಮತ್ತು ಗುಣಾತ್ಮಕ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ಪಾಲಕರಿಗೂ ಇದು ಎಷ್ಟು ಅವಶ್ಯ ಎನ್ನುವುದು ತಿಳಿದಿದೆ. ಗುರುವಾದವನು ಸನ್ಮಾರ್ಗದಲ್ಲಿ ನಡೆಯಬೇಕು. ಶಿಕ್ಷಕರನ್ನು ಮಕ್ಕಳು ಅನುಸರಿಸುತ್ತಾರೆ. ಅತ್ಯುತ್ತಮ ಗುರುವಿನಿಂದ ಕಾಗೆಯೂ ಹಂಸವಾಗಬಲ್ಲದು. ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ರೂಪಿಸಬೇಕು ಎಂದು ಹೇಳಿದರು.
ಗುರು ಸಂಸ್ಥೆಯ ಗುರಯ್ಯ ಹಿರೇಮಠ ಮಾತನಾಡಿ- ಸೇವಾ ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದೆ. ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಶಿಕ್ಷಣದ ಜೊತೆಗೆ ಸಮಾಜದ ಅಭಿವೃದ್ದಿಯಲ್ಲೂ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.
ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಪ್ಪ ಜೋಗಿ, ಆರತಿ ತಿಪ್ಪಣ್ಣ,ಶರಣಪ್ಪ ವಡಗೇರಿ ಮಾತನಾಡಿದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ, ರಾಜ್ಯ ಬಾರ್ ಕೌನ್ಸಿಲ್ ನ ಸದಸ್ಯೆ  ಶ್ರೀಮತಿ ಸಂದ್ಯಾ ಮಾದಿನೂರ ಮಾತನಾಡಿ-
 ಕಿನ್ನಾಳದಂತಹ ಗ್ರಾಮದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಿದ ಶಾಲೆ ಇಂದು ತನ್ನ ಹತ್ತನೇ ವಾರ್ಷಿಕೋತ್ಸವ ಆಚರಿಸುತ್ತಿರುವದು ಎಲ್ಲರೂ ಹೆಮ್ಮೆ ಪಡುವ ವಿಚಾರ. ನಿಸ್ವಾರ್ಥ ಸೇವೆಯಿಂದಾಗಿ ಇಂದು ಸೇವಾ ವಿದ್ಯಾಲಯ ಈ ಹಂತ ತಲುಪಿದೆ. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು. ಉತ್ತಮ  ಸಮಾಜ ನಿರ‍್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸೇವಾ ವಿದ್ಯಾಲಯ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಅದರೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.

Please follow and like us:
error

Leave a Reply

error: Content is protected !!