ಶಾಸಕ ಇಕ್ಬಾಲ್ ಅನ್ಸಾರಿಗೆ ಇರಕಲ್‌ಗಡಾದಲ್ಲಿ ಸನ್ಮಾನ

 ಕೊಪ್ಪಳ, ಸೆ. ೨೩. ಕೊಪ್ಪಳ ಜಿಲ್ಲೆಯ ಸಮಾಜ ಸೇವಕ ಮಾಜಿ ಸಚಿವ ಗಂಗಾವತಿಯ ಶಾಸಕ  ಇಕ್ಬಾಲ್ ಅನ್ಸಾರಿಗೆ ಇರಕಲ್‌ಗಡಾದಲ್ಲಿ ಸನ್ಮಾನಿಸಲಾಯಿತು.
ಸಾಮಾಜಿಕ ಸೇವೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ನಿರಂತರ ಹೋರಾಟ ಮಾಡುತ್ತಿರುವದಕ್ಕೆ, ಶಾಸಕರಾಗಿ ಆಯ್ಕೆಯಾದ ಮೇಲೆ ಪ್ರಥಮ ಬಾರಿಗೆ ಇರಕಲ್‌ಗಡಾಕಕೆ ಆಗಮಿಸಿದ ಅನ್ಸಾರಿಯವ

ರನ್ನು ಪಟಾಕಿ ಸಿಡಿಸಿ, ಹಾರ ಹಾಕಿ ನಗರಕ್ಕೆ ಸ್ವಾಗತಿಸಲಾಯಿತು. ನಂತರ ವೇದಿಕೆಯಲ್ಲಿ ಬೃಹತ್ ಹಾರದೊಂದಿಗೆ ಇಕ್ಬಾಲ್ ಅನ್ಸಾರಿ ಸೇನೆ ಕಾರ್ಯಕರ್ತ ಅಭಿಮಾನಿಗಳು ಶಾಲುಹೊದಿಸಿ ಫಲತಾಂಬೂಲದೊಂದಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಗಮೇಶ ಬಾದವಾಡಗಿ, ರಮೇಶ ಪಾಟೀಲ, ಬಸುಕುಮಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ  ಮಂಜುನಾಥ ಜಿ. ಗೊಂಡಬಾಳ, ಮಾರುತಿ ಪೂಜಾರ, ನೂರೇಶ ಪವಾರ್ ಇತರರಿದ್ದರು.

Leave a Reply