ಆರ್ಥಿಕ ಪ್ರಗತಿ ಶಿಕ್ಷಣದಿಂದ ಮಾತ್ರ ಸಾದ್ಯ : ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ೨೦: ಕುಣಕೇರಿ ಗ್ರಾಮದಲ್ಲಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಧುನಿಕ ಶಿಕ್ಷಣವು ಮನುಷ್ಯನ ಜೀವನಕ್ಕೆ ಅತ್ಯಾವಷ್ಯವಾಗಿದ್ದು ಪ್ರತಿಯೋಬ್ಬರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯದುಕೊಳ್ಳಬೇಕು ಕಾಂಗ್ರೆಸ್ ಸರ್ಕಾರವು ದಿನದಲಿತರಿಗೆ ಶೋಷಿತ ವರ್ಗಗಳಿಗೆ ಹಾಗೂ ಬಡವರಿಗೆ, ಅಲ್ಪಸಂಖ್ಯಾತರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣದ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು ಇದರ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಕರೆ ನೀಡಿ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಡವರಿಗಾಗಿ ಕೆ.ಜಿ.ಗೆ ೧ರೂಪಾಯಿಯಂತೆ ೩೦ಕೆ.ಜಿ ಅಕ್ಕಿಯ ಘೋಷಣೆ ಮಾಡಿದ್ದಾರೆ ರಾಜ್ಯವನ್ನು ವಿದ್ಯುತ್ ಕ್ಷಾಮದಿಂದ ಮುಕ್ತಗೊಳಿಸಿದ್ದಾರೆ ಪಕ್ಷದ ಚುನಾವಣಾ ಪೂರ್ವ ಪ್ರಣಾಳಿಕೆಯಂತೆ ಕ್ಷೇತ್ರದ ಪ್ರತಿಯೊಂದು ಗ್ರಾಮದ ಜಲವಂತ ಸಮಸ್ಯೆಗಳಾದ ನೀರಾವರಿ, ಶುದ್ಧಕುಡಿಯುವ ನೀರು, ರಸ್ತೆ, ಚರಂಡಿ, ಮಹಿಳಾ ಶೌಚಾಲಯ, ಆರೋಗ್ಯ ಕೇಂದ್ರಗಳ ಹಾಗೂ ಶಿಕ್ಷಣದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತಾ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷಭೇದ ಮರೆತು ಎಲ್ಲರು ಕೈ ಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭಲ್ಲಿ ಜಿ.ಪಂ. ಸದಸ್ಯೆ ಡಾ|| ಸೀತಾ ಗೋಳಪ್ಪ ಹಲಗೇರಿ, ದೇವಪ್ಪ ಹಾದರಮಗ್ಗಿ, ಗೋಳಪ್ಪ ಹಲಗೇರಿ, ಯಂಕಪ್ಪ ಪೂಜಾರ, ವಿರುಪಣ್ಣ ಕುರುಬರ್, ಹನುಮಂತಪ್ಪ ಗುರಿಕಾರ, ಭರಮಪ್ಪ ಗೊರ್, ಮಲ್ಲ ಚೌದ್ರಿ, ಪಕೀರಮ್ಮ, ವೀರಮ್ಮ ಸೊಂಪೂರು, ರಾಮಣ್ಣ ಬೆಳವನಾಳ, ಮಹೇಂದ್ರ, ಈರಪ್ಪ ಮುತ್ತಾಳ, ಮಹೇಶ ಗಣಪ, ಹೇಮಂತ ಗೌಡ್ರು, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
Please follow and like us:
error