
ಕೊಪ್ಪಳ ನಗರದ ಮಾದಿಗ ಸಮಾಜದ ಆದಿ ಜಾಂಬವ ಕಲ್ಯಾಣ ಮಂಟಪಕ್ಕೆ ಬಿಡುಗಡೆಯಾದ ೨೦ ಲಕ್ಷ ರೂ. ಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಾದಿಗ ಸಮಾಜವು ಶೋಷಿತ ಸಮುದಾಯವಾಗಿದ್ದು, ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜನಾಂಗವಾಗಿದೆ. ಸಮಾಜದ ವಿದ್ಯಾವಂತ ಯುವಕರು, ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಲು ದಲಿತರಲ್ಲಿ ಜಾಗೃತಿ ಮೂಡಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಲಿತರು ಶಿಕ್ಷಣವನ್ನು ಪಡೆಯುವುದು ಅನಿವಾರ್ಯವಾಗಿದೆ. ಸರ್ಕಾರವು ಸಹ ದಲಿತರು ಶಿಕ್ಷಣವನ್ನು ಪಡೆಯಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ದಲಿತರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು ಈ ಮೂಲಕ ಮುಖ್ಯ ವಾಹಿನಿಗೆ ಅವರು ಬರಬೇಕೆಂದು ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ ಹಾಗೂ ಬಾಬು ಜಗಜೀವನರಾಂ ರವರ ಕನಸಾಗಿತ್ತು. ಅದನ್ನು ನನಸು ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಯುವಕರ ಮತ್ತು ಜನಪ್ರತಿನಿಧಿಗಳ ಮುಖ್ಯ ಕರ್ತವ್ಯವಾಗಬೇಕು ಎಂದು ಶಾಸಕ ಸಂಗಣ್ಣ ಕರಡಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ನಗರಸಭೆ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಕಂದಾರಿ, ಡಾ. ಬಿ. ಜ್ಞಾನಸುಂದರ, ಗವಿಸಿದ್ದಪ್ಪ ಗಿಣಗೇರಿ, ಪರಶುರಾಮ ಕಿಡದಾಳ, ಸಿದ್ದಪ್ಪ ಕಟ್ಟಿಮನಿ, ಸಿದ್ದಪ್ಪ ಕಿಡದಾಳ, ಈಶಪ್ಪ ದೊಡ್ಮನಿ, ಮಹಾಂತೇಶ, ಗಾಳೆಪ್ಪ ಬಿಸರಳ್ಳಿ, ಹನುಮಂತಪ್ಪ ಇಂದ್ರಗಿ ಮೊದಲಾದವರು ಉಪಸ್ಥಿತರಿದ್ದರು.
Please follow and like us: