ಚುಟುಕು ಸಾಹಿತ್ಯಕ್ಕೆ ಭಾಷೆ, ವಯಸ್ಸಿನ ಅಂತರ ಇರುವುದಿಲ್ಲ : ಡುಂಡಿರಾಜ್

ಕೊಪ್ಪಳ ಆ. ೨೫: ಚುಟುಕು ಸಾಹಿತ್ಯವು ಬಹು ವಿಶಾಲವಾಗಿರುವ ಸಾಹಿತ್ಯ ಕ್ಷೇತ್ರವಾಗಿದ್ದು ಈ ಸಾಹಿತ್ಯದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಪದವು ವಿಶೇಷ ಅರ್ಥವನ್ನು ಕೊಡುವುದರ ಜೊತೆಗೆ ಹಾಸ್ಯ ಪ್ರಜ್ಞೆಯನ್ನು ಒಳಗೊಂಡಿರುತ್ತದೆ. ಚುಟುಕು ಸಾಹಿತ್ಯಕ್ಕೆ ಯಾವುದೇ ಭಾಷೆ ಮತ್ತು ವಯಸ್ಸಿಯ ಅಂತರ ವಿರುವುದಿಲ್ಲ ಎಂದು ಖ್ಯಾತ ಚುಟುಕು ಕವಿಗಳು ಹೆಚ್. ಡುಂಡಿರಾಜ್ ಅವರು ಅಭಿಪ್ರಾಯ ಪಟ್ಟರು. 
ನಗರದ ಸಾಹಿತ್ಯ ಭವನದಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವದ ಅಂಗವಾಗಿ ರವಿವಾರದಂದು ಜರುಗಿದ ಐದನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಚುಟುಕು ಸಾಹಿತ್ಯವನ್ನು ಸೃಷ್ಟಿ ಮಾಡುವ ಸಂದರ್ಭದಲ್ಲಿ ಐತಿಹಾಸಿಕ ಘಟನೆಗಳು, ಕುಟುಂಬದಲ್ಲಿ ಜರುಗುವ ಕೆಲ ಸ್ವಾರಸಕರ ಘಟನೆಗಳನ್ನು, ರಾಜಕೀಯ ಸೇರಿದಂತೆ ಪ್ರಸ್ತುತ ಅನೇಕ ಘಟನೆಗಳ ಮೇಲೆ ಕನ್ನಡ ಭಾಷೆ ಮಾತ್ರ ಸೀಮಿತವಾಗದೆ ಅನ್ಯ ಭಾಷೆಗಳನ್ನು ಬಳಸಿಕೊಂಡು ಸೃಷ್ಟಿ ಮಾಡಬಹುದು ಎಂದು ಅವರು ತಮ್ಮ ಹನಿಗವನದ ಮೂಲಕ ವಿವರಿಸಿದರು.
ಚುಟುಕು ಸಾಹಿತ್ಯವು ಉಳಿಯುವುದು ಇಂದಿನ ದಿನಗಳಲ್ಲಿ ಅತಿ ಅವಶ್ಯಕವಾಗಿದೆ ಮತ್ತು ಯುವ ಬರಹಗಾರರು, ಸಾಹಿತಿಗಳು ಚುಟುಕು ಸಾಹಿತ್ಯ ಸೃಷ್ಟಿ ಹೆಚ್ಚಿನ ಆದ್ಯತೆ ಕೊಡಬೇಕು ಎಂದ ಅವರು ಇಂತಹ ಸಾಹಿತ್ಯ ಸೃಷ್ಟಿಯಿಂದ ಜೀವನ ಉಲ್ಲಾಸ ವಿರುತ್ತದೆ ಎಂದು ಅವರು ಪ್ರತಿಪಾದಿಸಿದರು.
ಐದನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಸ್.ಸವದತ್ತಿ ಅವರು ಸಮ್ಮೇಳನ ಅಧ್ಯಕ್ಷೀಯ ಭಾಷನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಗಡಿ ಚಿಲವಾಡಗಿ ವಹಿಸಿದ್ದರು. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷೆ ಶ್ರೀಮತಿ ವಿಮಲಾ ಇನಾಂದಾರ ಅಳವಂಡಿ ಆಶೆಯ ನುಡಿ ನುಡಿದರು. ಹುನುಮಂತಪ್ಪ ಅಂಗಡಿ ಸಂಪಾದಕತ್ವದ ಸಹೃದಯಿ ಅಭಿನಂದನ ಗ್ರಂಥವನ್ನು ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ್ ಬಿಡುಗಡೆಗೊಳಿಸಿ ಮಾತನಾಡಿದರು. ಹಾಡು ಪಾಡು ಕವನ ಸಂಕಲನವನ್ನು ಇನ್ನೊರ್ವ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ಬಿಡುಗಡೆ ಗೊಳಿಸಿ ಮಾತನಾಡಿದರು.
ನಂತರ ಏರ್ಪಡಿಸಿ ಕವಿಗೋಷ್ಠಿಯಲ್ಲಿ ವಿವಿಧ ಕವಿಗಳು ತಮ್ಮ ಕವನವಾಚನ ಮಾಡಿದರು. ಅಲ್ಲದೇ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಸಂಜೆ ವೇಳೆಗೆ ಐದನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳದ  ಸಮಾರೂಪ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಹಿರಿಯ ಸಾಹಿತಿಗಳಾದ ವಿರುಪಾಕ್ಷಪ್ಪ ಕೋರಗಲ್ ಡಾ. ಮಹಾಂತೇಶ ಮಲ್ಲನಗೌಡ, ವಿಠ್ಠಪ್ಪ ಗೋರಂಟ್ಲಿ, ಡಾ. ಕೆ.ಜಿ.ಕುಲಕರ್ಣಿ ಶ್ರೀಮತಿ ನಿರ್ಮಲ ಬಳ್ಳೊಳ್ಳಿ, ಬಸವರಾಜ್ ಆಕಳವಾಡಿ, ಶ್ರೀಮತಿ ಸ್ನೇಹಲತಾ ಜ್ಯೋಷಿ, ಸಮಾಜ ಸೇವಕ ಮಹ್ಮದ್ ಗೌಸ್ ಸಾಬ ಅತ್ತಾರ, ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ಶರಣಬಸವರಾಜ ಬಿಸರಳ್ಳಿ, ಆರ್.ಎಂ.ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕ ಜಿಲ್ಲಾಧ್ಯಕ್ಷ ಎಂ.ಸಾದಿಕ ಅಲಿ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ವೇದಿಕೆ ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಎಸ್.ಎನ್.ತಿಮ್ಮಣ್ಣಗೌಡರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Leave a Reply