ನಗರ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ನಿಂದ ಮಲತಾಯಿ ಧೋರಣೆ : ಸಂಸದ ಸಂಗಣ್ಣ ಕರಡಿ

ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಸಭೆ : 
ಕೊಪ್ಪಳ, ಜ.೨೨: ಕಳೆದ ಬಿಜೆಪಿ ಸರಕಾರ ಅವಧಿಯಲ್ಲಿ ಕೊಪ್ಪಳ ನಗರದ ವಿವಿಧ ವಾರ್ಡಗಳ ಅಭಿವೃದ್ಧಿಗಾಗಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಒತ್ತಾಯಿಸಿ ನಗರೋತ್ತಾನ ಯೋಜನೆ ಅಡಿಯಲ್ಲಿ ೩೦ ಕೋಟಿ ರೂ. ಗಳನ್ನು ಮಂಜೂರು ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಬುಧವಾರ ರಾತ್ರಿ ಇಲ್ಲಿನ ೨೫ ನೇ ವಾರ್ಡಿನಲ್ಲಿ ಸಂಚರಿಸಿ ವಾರ್ಡಿನ ನಾಗರೀಕರಿಂದ ಸಮಸ್ಯೆಗಳನ್ನು ಆಲಿಸಿ ನಂತರ ತಮ್ಮ ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಕಾರಣಿಭೂತರಾದ ಹಿರಿಯ ರಾಜಕಾರಣಿ ಮನೆತನದ ದಿವಂಗತ ಸೈಯದ್ ಪಾಶಾಮಿಯಾ ಖಾದ್ರಿಯವರ ಮೊಮ್ಮಗ ಸೈಯದ್ ರೌಫ್ ಖಾದ್ರಿಯವರ ಮನೆಗೆ ಭೇಟಿ ನೀಡಿ ಉಭಯ ಕುಶಲೋಪಚರಿ ಹಾಗೂ ವಾರ್ಡಿನ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೊಪ್ಪಳ ನಗರದ ವಾರ್ಡಗಳ ಮೂಲಭೂತ ಅಭಿವೃದ್ಧಿಗಾಗಿ ತಾವು ಹಿಂದಿನ ಅವಧಿಯ ಶಾಸಕರಾಗಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಗರೋತ್ತಾನ ಯೋಜನೆ ಅಡಿಯಲ್ಲಿ ೩೦ ಕೋಟಿ ರೂ. ಗಳನ್ನು ನೀಡಿದ್ದರು, ಕಾಮಗಾರಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆದು ಬದಲಾದ ರಾಜಕೀಯ ಪರಿಸ್ಥಿತಿಯಿಂದ ಕಾಮಗಾರಿಗಳು ಸ್ಥಗಿತಗೊಂಡವು. ಈಗ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಆಢಳಿತ ನಡೆಸುತ್ತಿದ್ದರಿಂದ ಬಿಜೆಪಿಯಿಂದ ಚುನಾಯಿತ ನಗರಸಭಾ ಸದಸ್ಯರಿಗೆ ತಮ್ಮ ವಾರ್ಡಗಳಲ್ಲಿ ಕಾಮಗಾರಿ ಪ್ರಾರಂಭಿಸಲು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.  ಈಗಾಗೀ ಹಲವು ವಾರ್ಡಗಳಲ್ಲಿ ಬಹುತೇಕ  ಕಾಮಗಾರಿಗಳು ಅಭಿವೃದ್ಧಿ ಕಾಣದೇ ಸ್ಥಗಿತಗೊಂಡಿವೆ. ಶೀಘ್ರವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳವುದರ ಮುಖಾಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.  
ಕೊಪ್ಪಳ ತಾಲೂಕಿನ ಅಭಿವೃದ್ಧಿಗಾಗಿ ಬಿಜೆಪಿ ಸರಕಾರ ಸುಮಾರು ೪೦೦ ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಈಗ ಕೆಲವೊಂದು ಹಳ್ಳಿಗಳಲ್ಲಿ ಕೆಲಸ ಪ್ರಾರಂಭಗೊಂಡರೇ ಇನ್ನೂ ಬಹುತೇಕ ಹಳ್ಳಿಗಳಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಕೊಪ್ಪಳ ನಗರದಲ್ಲಿ ನಿರ್ಮಾಣವಾಗಬೇಕಿದ್ದ ೪ ಸಾವಿರ ಮನೆಗಳ ಸಹ ಸ್ಥಗಿತಗೊಂಡಿವೆ. ಕಳೆದ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿದ ಹಣದಲ್ಲಿ ಕ್ಷೇತ್ರದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಈಗಿನ ಕಾಂಗ್ರೆಸ್ ಸರಕಾರ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅವರು ಕ್ಷೇತ್ರ ಅಭಿವೃದ್ಧಿ ಕುಂಟಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 
ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಂಡಿರುವ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಪ್ರತಿ ವಾರ್ಡಿನಲ್ಲಿ ಒಂದು ಸಾವಿರ ಸದಸ್ಯತ್ವ ನೊಂದಣಿ ಮಾಡಿಸಲು ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಅಲ್ಲದೇ ಸ್ವಚ್ಛಭಾರತ ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ತಮ್ಮ ವಾರ್ಡಗಳ ಸ್ವಚ್ಛತೆ, ತಮ್ಮ ಮನೆಗಳ ಸುಮುತ್ತಲಿನ ಸ್ವಚ್ಛತೆಗೆ ಗಮನಹರಿಸಬೇಕು ಅಂದಾಗ ಮಾತ್ರ ಈ ಯೋಜನೆ ಸಫಲಗೊಳ್ಳಲು ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. 
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಕಂದಾರಿ, ರೌಫ್ ಖಾದ್ರಿ, ಖಾಸೀಂಸಾಬ ಬಾಬಣ್ಣವರ, ಪಕ್ಷದ ಪತ್ರಿಕಾ ಪ್ರತಿನಿಧಿ ಪರಮಾನಂದ ಯಾಳಗಿ, ಇಮಾಮ್ ಹುಸೇನ. ಅಜರುದ್ಧೀನ ಅಹ್ಮದ ಅಲಿ, ರುಸ್ತುಮ್ ಅಲಿ, ಇಮ್ರಾನ್ ಅಹ್ಮದ್.  ಅನ್ವರ್, ಮಹ್ಮದ್ ಸಲೀಮ್ ಮೇಕಾನಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Please follow and like us:
error