fbpx

ಚೈತನ್ಯ ರಥ ಯಾತ್ರೆಗೆ ಚಾಲನೆ

ವಜ್ರಬಂಡಿ : 
 ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ೧೫ ಅಂಶಗಳ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಲು ಚೈತನ್ಯ ರಥ ಕಾರ್ಯಕ್ರಮವನ್ನು ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಚಾಲನೆ ನೀಡಿದರು.
ಚೈತನ್ಯ ರಥ ಯಾತ್ರೆ ಮೂಲಕ ಜನಪದ ಹಾಗೂ ಬೀದಿ ನಾಟಕದ ಮುಖಾಂತರ ಸರ್ಕಾರದ ಯೋಜನೆಗಳಾದ ಉದ್ಯೋಗ ಖಾತ್ರಿ ಯೋಜನೆ, ನಿರ್ಮಲ ಭಾರತ ಯೋಜನೆ, ಸಾಕ್ಷರ ಭಾರತ ಯೋಜನೆಗಳ ಮಹತ್ವವನ್ನು ಜನರಿಗೆ ತಿಳಿಸಲಾಯಿತು. ಅಲ್ಲದೇ ಎಮ್.ಜಿ.ಎನ್.ಆರ್.ಇ.ಜಿ ಯೋಜನೆಯಲ್ಲಿ ಸಮಾನ ಕೂಲಿ ಸಮಾನ ವೇತನ, ವರ್ಷದಲ್ಲಿ ಒಂದು ಕುಟುಂಬಕ್ಕೆ-೧೦೦ ದಿನ ಕೂಲಿ, ಕಾಯಕ ಸಂಘಗಳ ರಚನೆ, ಪ್ರಸ್ತುತ ವರ್ಷದಲ್ಲಿ ದಿನಕ್ಕೆ ರೂಪಾಯಿ ೧೭೪ ಕೂಲಿ, ವಯಕ್ತಿಕ ಶೌಚಾಲಯ ನಿರ್ಮಾಣ ಮುಂತಾದ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು. 
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಅನುಸೂಯಮ್ಮ ಶರಣಪ್ಪ ಕಟರ‍್ದಾರ್, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಲೂಕ ಐಇಸಿ ಸಂಯೋಜಕರು, ಎನ್‌ಬಿಎ ಸ್ವಚ್ಚತಾಧೂತರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಭಾಗವಹಿಸಿದ್ದರು. 
ಚಿಕ್ಕಜಂತಕಲ್ : 
 ನಿರ್ಮಲ ಭಾರತ ಅಭಿಯಾನ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ೧೫ ಅಂಶಗಳ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಚೈತನ್ಯ ರಥ ಕಾರ್ಯಕ್ರಮವನ್ನು ಗಂಗಾವತಿ ತಾ.ಪಂ.ಯಿಂದ ತಾಲೂಕಿನ ಚಿಕ್ಕಜಂತಕಲ್ ಗ್ರಾಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ದುರುಗಮ್ಮ ಪರಶುರಾಮ, ಉಪಾಧ್ಯಕ್ಷೆ ಸರಸ್ವತಿ ಮಂಜುನಾಥ ಸ್ವಾಮಿ ಹಾಗೂ ಸರ್ವ ಸದಸ್ಯರು  ಚಾಲನೆ ನೀಡಿದರು.
ಜನಪ್ರತಿನಿಧಿಗಳಿಗೆ ಗ್ರಾಮ ಪಂಚಾಯತ್ ಜನಸಾಮಾನ್ಯರಿಗೆ ಯೋಜನೆ ಮಾಹಿತಿ ಹಾಗೂ ಯೋಜನೆಯಲ್ಲಿರುವ ಸವಲತ್ತುಗಳನ್ನು ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಈ ಚೈತನ್ಯ ರಥದ ಪ್ರಚಾರದ ಮೂಲಕ ಗ್ರಾಮೀಣ ಭಾಗದ ಎಲ್ಲರಿಗೂ ಯೋಜನೆಯಲ್ಲಿರುವ ಸವಲತ್ತುಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಕುಟುಂಬವು ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸಲು ಕರ ಪತ್ರದ ಮೂಲಕ ಪ್ರಚಾರ ಮಾಡಲಾಯಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಬಸವರಾಜಗೌಡ, ಲೆಕ್ಕಸಹಾಯಕರಾದ ರವೀಂದ್ರ, ಕಾರ್ಯದರ್ಶಿ ಅನ್ನದಾನಪ್ಪ, ತಾಲೂಕ ಐ.ಇ.ಸಿ. ಸಂಯೋಜಕರಾದ ಕೃಷ್ಣ ನಾಯಕ್ ಹಾಗೂ ಗ್ರಾ.ಪಂ.ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!