ಜಿಲ್ಲೆಯಾದ್ಯಂತ ಮುಂದುವರಿದ ಹೋರಾಟ

ಕೊಪ್ಪಳ : ಜಿಲ್ಲೆಯಾಧ್ಯಂತ ಅಣ್ಣಾ ಹಜಾರೆ ಪರ ಹೋರಾಟ ಮುಂದುವರೆದಿದ್ದು. ಗಂಗಾವತಿ, ಯಲಬುರ್ಗಾ,ಕೊಪ್ಪಳ ಗಳಲ್ಲಿ ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದರು.
ಗಂಗಾವತಿಯಲ್ಲಿ ಅಣ್ಣಾ ಹಜಾರೆಯವರನ್ನು ಬೆಂಬಲಿಸಿ ವಕೀಲರು ಬೈಕ್ ರ್ಯಾಲಿ ನಡೆಸಿದರೆ ಬಿಜೆಪಿ ಪಕ್ಷವು ಪಂಜಿನ ಮೆರವಣಿಗೆ ನಡೆಸಿತು.
ಯಲಬುರ್ಗಾದಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಪ್ರಧಾನ ಪ್ರತಿಕೃತಿ ದಹನ ಮಾಡಿದರು.
ಕೊಪ್ಪಳದಲ್ಲಿಯೂ ಸಹ ವಿವಿಧ ಸಂಘಟನೆಗಳವರು ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟಿಸಿದರು. ಬಿಜೆಪಿ ಪಕ್ಷವು ನಗರದಲ್ಲಿ ಸುರಿವ ಮಳೆಯಲ್ಲಿಯೇ ಪಂಜಿನ ಮೆರವಣಿಗೆ ನಡೆಸಿತು.

Leave a Reply