ಅಕ್ಷರ ಜಾತ್ರೆ ಯಶಸ್ವಿಯಾಗಿಸಿ – ಇಕ್ಬಾಲ್ ಅನ್ಸಾರಿ

ಸಾಹಿತ್ಯ ಸಮ್ಮೇಳನದ ಸುದ್ದಿ,ವಿವರಗಳು ಜಗತ್ತಿಗೆಲ್ಲ ತಲುಪಲಿ
ಗಂಗಾವತಿ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಊರಿನಲ್ಲಿಯೇ ನಡೆಯುತ್ತಿರುವುದು ನಮಗೆಲ್ಲ ಸಂತಸದ ವಿಷಯ. ಅಕ್ಷರ ಜಾತ್ರೆಗೆ ನಮ್ಮ ಊರು ಸಿದ್ದವಾಗಿದೆ. ಇಲ್ಲಿ ನಡೆಯುವ ಸಮ್ಮೇಳನದ ಸುದ್ದಿ,ವಿವರಗಳು ದೇಶ,ವಿದೇಶಗಳ ಕನ್ನಡಿಗರಿಗೆಲ್ಲ ತಲುಪಲಿ. ಅವರೆಲ್ಲ ಈ ಸಮ್ಮೇಳನಕ್ಕೆ ಬಂದು ಭಾಗವಹಿಸುವಂತಾಗಲಿ. ದೇಶ ವಿದೇಶಗಳಿಗೆ ನಮ್ಮ ನಾಡು, ನುಡಿಯ ಮಾಹಿತಿ,ಸುದ್ದಿ ತಲುಪಿಸುವ ಈ ನಿಮ್ಮ ಕನ್ನಡ ಸೇವೆ ನಿರಂತರವಾಗಿರಲಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾರೈಸಿದರು. 
ಜಿಲ್ಲೆಯ ಸಕಲ ಜನತೆಯು ಪಕ್ಷಬೇಧ ಮರೆತು ಎಲ್ಲ ಅಸಮಾಧಾನಗಳನ್ನು ಬದಿಗಿಟ್ಟು ಇದು ನಮ್ಮ ಜಿಲ್ಲೆಯ ಹೆಮ್ಮೆಯ ವಿಷಯವಾಗಿರುವುದರಿಂದ ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.  
ಅವರು ನಗರದಲ್ಲಿಂದು ಕನ್ನಡನೆಟ್.ಕಾಂ ರೂಪಿಸಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬ್ಲಾಗ್ ಉದ್ಘಾಟಿಸಿ ಮಾತನಾಡಿದರು. ಸಮ್ಮೇಳನಕ್ಕಾಗಿಯೇ  ರೂಪಿಸಲಾಗಿರುವ gangavathisammelana.blogspot.com   ಬ್ಲಾಗ್ ನಲ್ಲಿ ಸಮ್ಮೇಳನದ ಆರಂಭದ ಕಾರ್‍ಯಕ್ರಮಗಳು, ಸಭೆಗಳು, ಸಮ್ಮೇಳನದ ವಿವರಗಳು, ಆಮಂತ್ರಣ ಪತ್ರಿಕೆ, ವಿವಿಧ ಗೋಷ್ಠಿಗಳ ವಿವರ, ಸಮಿತಿಗಳು ಮತ್ತು ಸದಸ್ಯರ ವಿವರ ಸೇರಿದಂತೆ ಹಲವಾರು ವಿಷಯಗಳನ್ನು ನೀಡಲಾಗಿದೆ. ಆಸಕ್ತರು gangavathisammelana.blogspot.com   ಬ್ಲಾಗ್‌ನಲ್ಲಿ ಎಲ್ಲ ವಿವರ ಪಡೆಯಬಹುದು. ಕನ್ನಡನೆಟ್.ಕಾಂ ನ ಸಂಪಾದಕ ಸಿರಾಜ್ ಬಿಸರಳ್ಳಿ ಈ ಬ್ಲಾಗ್ ರೂಪಿಸಿದ್ದಾರೆ. 
ಬ್ಲಾಗ್ ಉದ್ಘಾಟನೆಯ ಸಮಯದಲ್ಲಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ಸಾರಿಗೆ ಸಮಿತಿಯ ಅಧ್ಯಕ್ಷ ಆರತಿ ತಿಪ್ಪಣ್ಣ, ಹಿರಿಯ ಹೈಕೋರ್ಟ ವಕೀಲರಾದ ನಾಗನಗೌಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮.
Please follow and like us:
error