ಶ್ರೀರಾಮುಲು ಬಣಕ್ಕೆ ಅಮಾನತ್ತು ಲೆಕ್ಕಕ್ಕಿಲ್ಲ

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಲಾಬಲ ಪ್ರದರ್ಶನಕ್ಕೆ ಸಿದ್ಧವಾಗಿರುವ ಆಡಳಿತಾರೂಢ ಬಿಜೆಪಿ, ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ನಾಲ್ವರು ಶಾಸಕರು ಮತ್ತು ಇಬ್ಬರು ಸಂಸದರನ್ನು ಅಮಾನತು ಮಾಡಿರುವುದರಿಂದ ಚುನಾವಣಾ ಕಣ ರಂಗೇರಿದ್ದು, ಶ್ರೀರಾಮುಲು ಬಣದ ಕೆಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.
ಪಕ್ಷ ತೊರೆದು ಸ್ವತಂತ್ರವಾಗಿ ಸ್ಪರ್ಧಿಸುವ ಮೂಲಕ ಆಡಳಿತಾರೂಢ ಪಕ್ಷಕ್ಕೇ ಸೆಡ್ಡು ಹೊಡೆದಿರುವ ಶ್ರೀರಾಮುಲು ಜತೆ ಗುರುತಿಸಿಕೊಂಡಿರುವ ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ, ಶಾಸಕರಾದ ಸುರೇಶಬಾಬು, ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ ಪಕ್ಷದ ನಿರ್ಧಾರಕ್ಕೆ ಯಾವುದೇ ಬೆಲೆ ನೀಡದೆ ಶ್ರೀರಾಮುಲು ಅವರೊಂದಿಗಿನ ಸಖ್ಯವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.  ಪ್ರಜಾವಾಣಿ ನ್ಯೂಸ್

Leave a Reply