fbpx

ನಗರದ ಸೈಕಲ್ ಮಾಸ್ಟರ- ಮಹಮ್ಮದ ನಜೀರ ಅಮ್ಮದ ಸಿದ್ಧಿಕಿ ನಿಧನ

ಕೊಪ್ಪಳ : ನಗರದ ಸೈಕಲ್ ಮಾಸ್ಟರ ಎಂದು ಖ್ಯಾತರಾದ ಮಹಮ್ಮದ ನಜೀರ ಅಮ್ಮದ ಸಿದ್ಧಿಕಿ (೭೪) ಗುರುವಾರದಂದು ಬೆಳಗಿನ ಜಾವ ನಿಧನ ಹೊಂದಿದರು. 
ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.   ಮೃತರ ಅಂತ್ಯಕ್ರಿಯೆ ಕಿನ್ನಾಳ  ರಸ್ತೆಯ ಖಬರ್‌ಸ್ತಾನದಲ್ಲಿ ಅಪಾರ ಜನಸ್ತೋಮ ಮಧ್ಯದಲ್ಲಿ   ಜರುಗಿತು.   
ಸಂತಾಪ: ಮೃತರ ನಿಧನಕ್ಕೆ  ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ, ಸಂಗಣ್ಣ ಕರಡಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಸ್.ಬಿ. ನಾಗರಳ್ಳಿ, ನಗರಸಬೆ ಉಪಾಧ್ಯಕ್ಷ ಅಮ್ಜದ ಪಟೇಲ್, ಎಂ. ಕಾಟನ ಪಾಷಾ, ಬಾಳಪ್ಪ ಬಾರಕೇರ, ವೀರಣ್ಣ ಸಂಡೂರ ಮತ್ತಿತರರು ಸಂತಾಪ ಸೂಚಿಸಿದ್ದಾರೆ. 
Please follow and like us:
error

Leave a Reply

error: Content is protected !!