ತುಂಗಭದ್ರಾ ಎಡದಂತೆ ಮುಖ್ಯ ಕಾಲುವೆಯ ಮೈಲ್ ನಂಬರ್ ೨೨ ರ ಸೇತುವೆ ಭಾರಿ ವಾಹನ ಸಂಚಾರ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರೈಲ್ವೆ ಕಾಮಗಾರಿ ಮಾಡುತ್ತಿರುವ ಗುತ್ತೇದಾರರು ಸರಕಾರದ ಅನುಮತಿ ಪಡೆಯದೇ ಕೆರೆ ಮಣ್ಣ, ಉಸುಕು ಮತ್ತು ಮರಮ್ ಕಳ್ಳತನದಿಂದ ಅಗೆದು ಕಾಮಗಾರಿಗೆ ಬಳಸುತ್ತಿದ್ದಾರೆ. ಇದರ ಪರಿಣಾಮ ಅಂತರ್ಜಲ ಕುಸಿತ ಕೆರೆನಾಶಗೊಂಡು ರೈತರಿಗೆ ಜಾನುವಾರುಗಳಿಗೆ ಕುಡಿವ ನೀರಿನ ಅಭಾವ ತಲೆದೂರಿದೆ. ಕಳ್ಳತನದಿಂದ ಮೈನಿಂಗ್ ಮಾಡುವುದರಿಂದ ಸರಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ರಾಜಧನ ವಂಚನೆಯಾಗುತ್ತದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಸಂಶಯ ಬಂದಿದೆ.ಅನಧಿಕೃತ ಮೈನಿಂಗ್ ಮಾಡುವುದಲ್ಲದೇ ತುಂಗಭದ್ರಾ ಎಡದಂಡೆ ಕಾಲುವೆ ೨೨ನೇ ದಾಸನಾಳ ಸೇತುವೆ ಮೇಲೆ ಭಾರೀ ವಾಹನಗಳ ಮೂಲಕ ಮಣ್ಣು, ಉಸುಕು, ಮರಮ್ ಸಾಗಿಸುತ್ತಿದ್ದಾರೆ. ಈ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಆಯಾ ಇಲಾಖೆಯ ಅನುಮತಿ ಪಡೆದಿರುವುದಿಲ್ಲ.ಅನಧಿಕೃತ ಉಸುಕು-ಕೆರೆಮಣ್ಣು-ಮರಮ್ ಮೈನಿಂಗ ತಡೆಗಟ್ಟಿ ದಾಸನಾಳ ಸೇತುವೆ ಮೇಲೆ ಭಾರಿ ವಾಹನ ಸಂಚಾರದ ಬಗ್ಗೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ತಹಸೀಲ್ದಾರರ ಕಛೇರಿ ಮುಂದೆ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಗಂಗಾವತಿಯ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಮೇಶ ನಾಯಕ, ರಾಜು, ಮಲ್ಲಪ್ಪ ನಾಯಕ, ಮಲ್ಲೇಶ, ಚಾಂದಭಾಷಾ, ಬಸಪ್ಪ ನಾಯಕ, ಯಮನೂರಿ, ವಿರೇಶ ಹಾಜರಿದ್ದರು ಎಂದು ರಾಜ್ಯಾಧ್ಯಕ್ಷ ಕೆ. ಗಣೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply