ರಾಜ್ಯ ಮಟ್ಟದ ೪ ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

 ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 
ಕೊಪ್ಪಳ : ಮಕ್ಕಳಲ್ಲಿರುವ ಕನ್ನಡ ಸಾಹಿತ್ಯ ಪ್ರತಿಬೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ರಾಜ್ಯ ಮಟ್ಟದ ೪ ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಜ: ೩೧ ರಂದು ಏರ್ಪಡಿಸಲಾಗುವದು. ೫ ರಿಂದ ೧೨ ನೇ ತರರಗತಿ ವರೆಗೆ ಓದುತ್ತಿರುವ ಮಕ್ಕಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿದೆ. 
ಈಗಾಗಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು, ಪುಸ್ತಕ ಪ್ರಕಟಿಸಿರುವ ಮಕ್ಕಳು ಯಾವ ಪ್ರಕಾರದಲ್ಲಿ ಪುದ್ತಕ ಬರೆದಿದ್ದಾರೆ. ಅವುಗಳಿಗೆ ಯಾವುದಾದರೂ ಪ್ರಶಸ್ತಿ ಬಂದಿವೆಯೇ, ಅವರ ಹೆಸರು ಓದುತ್ತಿರುವ ತರಗತಿ, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರದೊದಿಗೆ ಶಾಲೆಯ ಮುಖ್ಯಸ್ಥರ ಸಹಿಯೊಂದಿಗೆ ಜನೆವರಿ ೨೦ ರ ಒಳಗಾಗಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇವರಿಗೆ ಕಳಿಸಿಕೊಡಲು ಕೋರಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಸಾಹಿತ್ಯಾಸಕ್ತ ಮಕ್ಕಳಲ್ಲಿ ಮನವಿ ಮಾಡಿದ್ದಾರೆ. 
ಹೆಚ್ಚಿನ ಮಾಹಿತಿಗಾಗಿ ೯೪೪೯೫೫೨೭೯೫, ೯೦೦೮೫೮೫೪೮೨ ದೂರವಾಣಿಗೆ ಸಂಪರ್ಕಿಸಲು ಕೋರಲಾಗಿದೆ. 

Related posts

Leave a Comment