ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ, ಯಶಸ್ವಿಗೊಳಿಸಿ – ಕವಿಸಮೂಹ

ಕೊಪ್ಪಳ :  ಕವಿಯಾದವನು ಸಮಕಾಲೀನತೆಯನ್ನು ಅರಿತುಕೊಳ್ಳಬೇಕು.ಜನಪದಿಕರಣಗೊಂಡ ಕಾವ್ಯ ಜನತೆಯನ್ನು ಮುಟ್ಟುತ್ತದೆ. ಕವಿಸಮೂಹದ ನೂರನೇ ಕಾರ್‍ಯಕ್ರಮ ವಿಶೇಷವಾಗಿ ಹಮ್ಮಿಕೊಳ್ಳೋಣ. ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಂಡು ಅದನ್ನು ಯಶಸ್ವಿ ಸಮ್ಮೇಳನವಾಗಿಸೋಣ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೮೩ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಶಾಂತಾದೇವಿ ಹಿರೇಮಠ- ಆಸ್ತಿ, ಚುಟುಕುಗಳು, ಪುಷ್ಪಾವತಿ-ಮೊಬೈಲ್, ಗುರುರಾಜ್ ಅಂಗಡಿ- ಸ್ವಚ್ಛ ಕನ್ನಡ ಭಾಷೆಯ ಬಗ್ಗೆ ಹಕ್ಕೊತ್ತಾಯ, ವಿಠ್ಠಪ್ಪ ಗೋರಂಟ್ಲಿ- ಕುವೆಂಪು ಕುರಿತ ಹನಿಗಳು, ಶಿವಪ್ರಸಾದ ಹಾದಿಮನಿ- ಹೀಗಿರು, ಕನಕಪ್ಪ ತಳವಾರ -ಕಾವೇರಿ ನೀಳ್ಗವನ, ಡಾ.(ಕುಂಪಾ) ಬಸವರಾಜ್-ಶಾಂತಿಯ ಸಾಮಿಪ್ಯ, ಕುರುವತ್ತಿಗೌಡ್ರ- ದ್ವೇಷ,ತಬ್ಬಲಿ, ಅನಸೂಯಾ ಜಾಗೀರದಾರ- ಇನ್ನೆಷ್ಟು ಅಮಾಯಕಳಾಗುತ್ತಿ, ವಿಜಯಲಕ್ಷ್ಮೀ ಮಠದ- ಕ್ರಾಂತಿ ವಾಂತಿ, ವಾಚಾಳಿ, ಅಲ್ಲಮಪ್ರಭು ಬೆಟ್ಟದೂರು- ಕಲಿಗಳು, ಬಸವರಾಜ್ ಚೌಡಕಿ-ಯುಗಾದಿ, ಬಸವರಾಜ್ ಸಂಕನಗೌಡರ- ವಾಚನಾಲಯ, ರಾಮಣ್ಣ ವೇಮಲಿ- ವನಮಾಲೆ , ಹನುಮಂತಪ್ಪ ಅಂಡಗಿ- ನೀನು, ನಟರಾಜ ಸವಟಿ- ಪ್ರೇಮೋತ್ಸವ -೨, ಶಾಂತು ಬಡಿಗೇರ- ಕುಕ್ಕೆಯಲಿ ಕೊಂಕಾಟ, ಸಿರಾಜ್ ಬಿಸರಳ್ಳಿ- ಚುಟುಕುಗಳ ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಪ್ರಬಂಧ ಮತ್ತು ಕಾವ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.  ನಮ್ಮ ಜಿಲ್ಲೆಯಲ್ಲಿಯೇ ನಡೆಯುತ್ತಿರುವ ಅಕ್ಷರ ಜಾತ್ರೆಯಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಯಿತು. ಕಾರ್‍ಯಕ್ರಮದಲ್ಲಿ ಯಶವಂತ ಮೇತ್ರಿ, ಬಸವರಾಜ್ ಶೀಲವಂತರ,ದೇವರಾಜ್ ಹೊಸಮನಿ, ರೋಹಿಣಿ ನಾಗರಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಶಿವಪ್ರಸಾದ ಹಾದಿಮನಿ , ಬಸವರಾಜ್ ಸಂಕನಗೌಡರ ವಂದನಾರ್ಪಣೆ ಮಾಡಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 
Please follow and like us:
error