ತಾಳಕನಕಾಪುರ ಗಾಣಿಗರ ಸಂಘ ರಚನೆ

 ಕೊಪ್ಪಳ ತಾಲೂಕಿನ ತಾಳಕನಕಾಪುರ ಗ್ರಾಮದಲ್ಲಿ ಜಿಲ್ಲಾ ಗಾಣಿಗ ಸಂಘದ ಮಾರ್ಗದರ್ಶನದಲ್ಲಿ ಗ್ರಾಮಮಟ್ಟದ ಸಮಾಜದ ಅಭಿವೃದ್ದಿಗಾಗಿ ಹಾಗೂ ಸಮಾಜದ ಚಟುವಟಿಕೆಗಳನ್ನು ಚುರುಕುಗೋಳಿಸುವ ನಿಟ್ಟಿನಲ್ಲಿ ಸಂಘದ ರಚನೆಯನ್ನು ಜಿಲ್ಲಾಧ್ಯಕ್ಷರಾದ  ತೋಟಪ್ಪ ಕಾಮನೂರ ನೇತೃತ್ವದಲ್ಲಿ ಸಂಘವನ್ನು ರಚನೆ ಮಾಡಲಾಯಿತು. ತಾಳಕನಕಾಪುರ ಗ್ರಾಮದಲ್ಲಿ ನೂತನವಾಗಿ ಪದಾಧಿಕಾರಿಗಳ  ಅವಿರೋಧವಾಗಿ ಆಯ್ಕೆ ಮಾಡಲಾಯಿತು ಗೌರವಾಧ್ಯಕ್ಷರಾಗಿ  ಯಮನೂರಪ್ಪ ಗೆದ್ದಿಗೇರಿ, ಈರಣ್ಣ ಗೆದ್ದಿಗೇರಿ ಅಧ್ಯಕ್ಷರಾಗಿ-ಶರಣಪ್ಪ ಹಳ್ಳಿ ಉಪಾಧ್ಯಕ್ಷರಾಗಿ ಸಣ್ಣ ಹನುಮಪ್ಪ ಗೆದ್ದಿಗೇರಿ, ಈಶಪ್ಪ ಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಗವಿಸಿದ್ದಪ್ಪ ಗೆದ್ದಿಗೇರಿ, ಸಹಕಾರ್ಯದರ್ಶಿಯಾಗಿ ಮಂಜುನಾಥ ಗೆದ್ದಿಗೇರಿ, ಖಜಾಂಚಿ-ಬಸವರಾಜ ಹಳ್ಳಿಯವರನ್ನು ನೇಮಿಸಲಾಯಿತು. 
  ಜಿಲ್ಲಾಧ್ಯಕ್ಷರಾದ   ತೋಟಪ್ಪ ಕಾಮನೂರರವರು ಉದ್ಘಾಟಕರಾಗಿ ಅಧ್ಯಕ್ಷತೆಯನ್ನು ಸಂಗನಗೌಡ ಕರ್ಕಿಹಳ್ಳಿ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಡಾ|| ಮಾರ್ಕಂಡೇಯ ಹಂದ್ರಾಳರವರು ಗಾಣಿಗ ಸಮಾಜದ ಇತಿಹಾಸ, ಸಂಘ ರಚನೆಯನ್ನು ತಿಳಿಸಿದರು. ತೋಟಪ್ಪ ಕಾಮನೂರರವರು ಗಾಣಿಗ ಸಮಾಜದ ಸಂಘಟಣೆ ಕಾರ್ಯಗಳು, ಸವಲತ್ತು, ಶಿಕ್ಷಣದ ಒತ್ತಾಸೆಯನ್ನು ವ್ಯಕ್ತಪಡಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು, ರಾಘವೇಂದ್ರರಾವ್ ದೇಶಪಾಂಡೆ, ದ್ಯಾಮಣ್ಣ ಕುರಿ ಉಪಸ್ಥಿತರಿದ್ದರು.
ನಿರೂಪಣೆಯನ್ನು ಶರಣಪ್ಪ ಏಳುಗುಡ್ಡದ ಇವರು ನಿರ್ವಹಿಸಿದರು. ನಂತರ ನಿಂಗಪ್ಪ ಗೆದ್ದಿಗೇರಿ, ಪ್ರಧಾನ ಕಾರ್ಯದರ್ಶಿಗಳು, ಕೊಪ್ಪಳದ ತಾಲೂಕಾ ಗಾಣಿಗ ನೌಕರರ ಸಂಘ, ತೋಟಪ್ಪ ಕಾಮನೂರರವರಿಗೆ ಸನ್ಮಾನಿಸಲಾಯಿತು. ಹಾಗೂ ನೂತನ ಪದಾಧೀಕಾರಿಗಳಿಗೆ ಪ್ರಮಾಣ ವಚನವನ್ನು ಸಹ ಬೋಧಿಸಿದರು. 
Please follow and like us:
error