ಜನಾರ್ಧನ ರೆಡ್ಡಿ ಕೊಪ್ಪಳದಿಂದ ಸ್ಪರ್ಧೆ ಇಲ್ಲ!

ಕೊಪ್ಪಳ ಜಿಲ್ಲೆಯಿಂದ ಜನಾರ್ಧನ ರೆಡ್ಡಿ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಟುಸ್ಸೆಂದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ಜನಾರ್ಧನ ರೆಡ್ಡಿ ಸ್ಪರ್ಧೆ ಖಚಿತ ಎನ್ನಲಾಗುತ್ತಿತ್ತು. ಆದರೆ ಬಿಡುಗಡೆಯಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕುಷ್ಟಗಿಯಿಂದ ರಾಜಶೇಖರಗೌಡ ಗೋನಾಳ, ಯಲಬುರ್ಗಿಯಿಂದ ನವೀನ ಗುಳಗಣ್ಣನವರ ಹೆಸರಿದೆ.

ಕನಕಗಿರಿ,ಕೊಪ್ಪಳ,ಗಂಗಾವತಿಯಲ್ಲಿ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ. ಕಳೆದ ಹಲವಾರು ತಿಂಗಳುಗಳಿಂದ  ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕೆ.ಎಂ.ಸಯ್ಯದ್ ರಿಗೆ ಕೊಪ್ಪಳದಿಂದ ಟಿಕೇಟ್ ಖಚಿತ ಎನ್ನಲಾಗುತ್ತಿತ್ತು. ಆದರೆ ಪಕ್ಷದ ಅಭ್ಯರ್ಥಿಗಳ ಲಿಸ್ಟ್ ನಲ್ಲಿ ಅವರ ಹೆಸರು ಕಾಣುತ್ತಿಲ್ಲ. ಕೊಪ್ಪಳದಲ್ಲಿ ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿ ನಿರ್ಧಾರವಾಗಬಹುದು ಎನ್ನಲಾಗುತ್ತಿದೆ.  ಜನಾರ್ಧನ ರೆಡ್ಡಿ ಸ್ಪರ್ಧಿಸುವ  ಖಚಿತ ಇಲ್ಲ ಎಂದು ಜಿಲ್ಲಾ ಸಂಚಾಲಕ ರತ್ನಾಕರ್ ಹೇಳಿದ್ದಾರೆ.
Please follow and like us:
error