ಮಾಜಿ ಪ್ರಧಾನಿ .ದಿ- ರಾಜೀವ್‌ಗಾಂಧೀಯವರ ೨೩ನೇ ಪ್ಮಣ್ಯತಿಥಿ ಆಚರಣೆ

 ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಲಯದಲ್ಲಿ ಬೆ.೧೦.೦೦ ಗಂಟೆಗೆ ದಿವಂಗತ ಮಾಜಿ ಪ್ರಧಾನಿ ರಾಜೀವ್‌ಗಾಂಧೀಯವರ ೨೩ನೇ ಪುಣ್ಯತಿಥಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಹಿರಿಯ ಕಾಂಗ್ರೇಸ್ಸಿಗರಾದ ಎಚ್.ಎಲ್.ಹಿರೇಗೌಡ್ರು ಹಾಗೂ ಅರ್ಜುನಸಾ ಕಾಟವಾ ಇವರು ಮಾತನಾಡಿದರು ರಾಜೀವ್‌ಗಾಂಧೀಯವರು ರಾಷ್ಟ್ರಕಂಡ ಮಹಾನ್ ನಾಯಕರಾಗಿದ್ದರು. ಭಾರತವನ್ನು ಸರ್ವಾಂಗೀಣ ಅಬಿವೃದ್ದಿ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ, ತಾಂತ್ರೀಕ ಯುಗದಲ್ಲಿ ಪ್ರಪಂಚದ ಭೂಪಟದಲ್ಲಿ ಭಾರತವನ್ನು ಉನ್ನತ ಸ್ಥಾನಕ್ಕೆ ಏರಿಸಿ ಮುಂದುವರೆದ ರಾಷ್ರಗಳ ಪೈಪೋಟಿಯಲ್ಲಿ ದೇಶವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ರಾಜಿವ್‌ಗಾಂಧಿಯವರಿಗೆ ಸಲ್ಲುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿ (೪೦) ರಾಷ್ಟ್ರದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಇವರು ನರಹಂತಕ ಕುತಂತ್ರದಿಂದ ದೇಶಕ್ಕೆ ಪ್ರಾಣ ತ್ಯಾಗ ಮಾಡಿದರು. 
ಈ ಸಂಧರ್ಭದಲ್ಲಿ ಗವಿಸಿದ್ದಪ್ಪ ಮುದಗಲ್, ಇಂಧೀರಾ ಬಾವಿಕಟ್ಟಿ, ವೆಂಕನಗೌಡ್ರ , ಶಕುಂತಲಾ ಹುಡೇಜಾಲಿ, ಬಸವನಗೌಡ ಡಂಬ್ರಳ್ಳಿ, ನಾಗರಾಜ ಬಳ್ಳಾರಿ, ಶಿವಾನಂದ ಹೊದ್ಲುರು, ಎ.ವಿ.ಕಣವಿ, ಅಜ್ಜಪ್ಪಸ್ವಾಮಿ, ಮಂಜುನಾಥ ಗಾಳಿ, ದಾರವಾಡ ರಪಿ, ಮೆಹೆಬೂಬ ಅರಗಂಜಿ, ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್ ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error