ಸ್ಕೌಟ್ಸ್ ಗೈಡ್ಸ್ ನಿಂದ ಮಕ್ಕಳ ವಿಕಾಸ-ಮುದೇಗೌಡ

  ಸ್ಕೌಟ್ಸ್ ಗ್ಸೈಡ್ಸ್ ನಿಂದ ಮಕ್ಕಳು ವಿಕಾಸ ಹೊಂದುವದರೊಂದಿಗೆ ಉಳಿದ ಮಕ್ಕಳಿಗಿಂತ ವಿಭಿನ್ನವಾಗಿರುವದು ಕಾಣುತ್ತದೆ ಎಂದು ತಾ. ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ ಹೇಳಿದರು.
ಅವರಿಂದು ನಗರದ ಬಿಇಓ ಕಛೇರಿ ಹಿಂಭಾಗದಲ್ಲಿರುವ ಸರದಾರಗಲ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ತಾಲೂಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ತಾಲೂಕ ಮಟ್ಟದ ಸ್ಕೌಟ್ಸ್ ಗ್ಸೈಡ್ಸ್ ರ‍್ಯಾಲಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸ್ಕೌಟ್ಸ್ ಗ್ಸೈಡ್ಸ್ ಸಂಸ್ಥೆಗೆ ತಾಲೂಕ ಪಂಚಾಯತ ಕಡೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಿಕೊಡಲಾಗುವದು, ಜಿಲ್ಲಾ ಸ್ಕೌಟ್ಸ್ ಗ್ಸೈಡ್ಸ್ ತರಬೇತಿ ಕೇಂದ್ರಕ್ಕೆ ಎನ್‌ಆರ್‌ಇಜಿ ಯಲ್ಲಿ ಕಂಪೌಂಡ್ ನಿರ್ಮಾಣಕ್ಕೆ ಒತ್ತು ನೀಡಲಾಗುವದು ಎಂದ ಅವರು ಬಹಳಷ್ಟು ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದು ಖುಷಿ ತಂದಿದೆ ಎಂದರು.                    
ನಗರಸಭೆ ಅಧ್ಯಕ್ಷೆ ಲತಾ ಸಂಡೂರ ಕಾರ್ಯಕ್ರಮ ಉದ್ಘಾಟಿಸಿದರು, ಗೈಡ್ಸ್ ಜಿಲ್ಲಾ ಆಯುಕ್ತೆ ಸಂಧ್ಯಾ ಮಾದಿನೂರ ಸ್ಕೌಟ್ಸ್ ಗ್ಸೈಡ್ಸ್ ಧ್ವಜಾರೋಹಣ ಮಾಡಿದರು. ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಸ್ಥಳಕ್ಕೆ ಭೇಟಿನೀಡಿ ಮಕ್ಕಳ ಕುಶಲೋಪರಿ ವಿಚಾರಿಸಿದರು. ಸರದಾರಗಲ್ಲಿ ಸ.ಹಿ.ಪ್ರಾ. ಶಾಲೆಯ ಮುಖ್ಯ ಗುರು ಶಂಭುಲಿಂಗನಗೌಡ ಪಾಟೀಲ ಮತ್ತು ಸಂಘಟಕ ಮಂಜುನಾಥ ಜಿ. ಗೊಂಡಬಾಳ ಹುತಾತ್ಮ ಯೋಧ ಮಲ್ಲಿಕಾರ್ಜುನ ಬಂಡೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಸ.ಹಿ.ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಮಂಜುನಾಥ, ಸ್ಕೌಟ್ಸ್ ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಎ. ಎಸ್. ಶಿವಕುಮಾರ ಮಾತನಾಡಿದರು. ವೀರಕನ್ನಡಿಗ ಸಂಘದ ಶಿವಾನಂದ ಹೊದ್ಲೂರ, ಪ್ರಭಶಕರ ದಾಸರ, ವೀರಯ್ಯ ಒಂಟಿಗೋಡಿಮಠ, ವಿಶ್ವನಾಥ ರೆಡ್ಡಿ, ಆನಂದಕುಮಾರ

ಇತರರು ಉಪಸ್ಥಿತರಿದ್ದರು.

 ಜಿಲ್ಲಾ ಸಂಘಟನಾ ಆಯುಕ್ತ ಜಯರಾಜ ಬೂಸದ್ ಮಾತನಾಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕೊಪ್ಪಳ ತಾಲೂಕ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿ ೨೦೧೪ ರಲ್ಲಿ ತಾಲೂಕ ಮತ್ತು ಜಿಲ್ಲೆಯಲ್ಲಿ ಸ್ಕೌಟಿಂಗ್ ಚಳುವಳಿಗೆ ವೇಗತರಲಾಗುವದು ಎಂದರು.
ಒಂದು ದಿನದ ಕಾರ್ಯಕ್ರಮದಲ್ಲಿ ಸುಮಾರು ೨೫೦ ಸ್ಕೌಟ್ಸ್ ಗೈಡ್ಸ್ ಮಕ್ಕಳು ಪಾಲ್ಗೊಂಡಿದ್ದರು. ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ಮಾಡಿದ ಶಂಭುಲಿಂಗನಗೌಡ ಪಾಟೀಲರವರಿಗೆ ಸನ್ಮಾನ ಮಾಡಲಾಯಿತು. ಬಸವನಗೌಡ್ರ ಸ್ವಾಗತಿಸಿದರು, ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರಹ್ಲಾದ ಬಡಿಗೇರ ವಂದಿಸಿದರು. ಈ ಸಂದರ್ಭದಲ್ಲಿ ಕ್ವಿಜ್ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚಿತ್ರಕಲೆ ವಿಜೇತರು : ಪವನಕುಮಾರ ಸರಸ್ವತಿ ವಿದ್ಯಾಮಂದಿರ ಪ್ರಥಮ, ಉದಯ ಜಿ. ಎಂ. ಆದರ್ಶ ವಿದ್ಯಾಲಯ ದ್ವಿತಿಯ ಮತ್ತು ಅಭಿಲಾಷ ಎಂ. ಜಿ. ಸ್ವಾಮಿ ವಿವೇಕಾನಂದ ಶಾಲೆ ತೃತೀಯ ಸ್ಥಾನ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಮಾರುತಿ ಈರಪ್ಪ ಮತ್ತು ಶೌಕತಲಿ ಮೌಲಾಹುಸೇನ ಪ್ರಥಮ ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ರೇಣುಕಾ ಮತ್ತು ಅಚ್ಯುತ್ ವೈದ್ಯ ದ್ವಿತಿಯ ಸ್ಥಾನ ಪಡೆದುಕೊಂಡರು ಸಮಾರೋಪದಲ್ಲಿ ಬಹುಮಾನ ನೀಡಲಾಯಿತು.
Please follow and like us:
error

Related posts

Leave a Comment