ಬಿಜೆಪಿ ಸರಕಾರ ರೈತ ವಿರೋಧಿ -ಇಕ್ಬಾಲ ಅನ್ಸಾರಿ

ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಹಾಗೂ ಬಡವರ ದೀನ ದಲಿತರ ನೆಮ್ಮದಿಗಾಗಿ ಕಾಂಗ್ರೆಸ ಪಕ್ಷಕ್ಕೆ ಮತ ಚಲಾಯಿಸಿ ಕಾಂಗ್ರೆಸ ಅಭ್ಯರ್ಥಿ ಬಸವರಾಜ ಹಿಟ್ನಾಳರವರನ್ನು ಆಯ್ಕೆಗೊಳಿಸುವಂತೆ ಮಾಜಿ ಸಚಿವ ಕಂಗ್ರೆಸ ಮುಖಂಡ  ಇಕ್ಬಾಲ ಅನ್ಸಾರಿ ಮನವಿ ಮಾಡಿದರು.ಅವರು ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಬಿಜೆಪಿ ಸರಕಾರ ಕಳೆದ ಮೂರುವರ್ಷದಲ್ಲಿ ಬಡವರನ್ನು ಒಕ್ಕಲೆಬ್ಬಿಸಿದೆ. ಹಾವೇರಿಯಲ್ಲಿ ರೈತರಮೇಲೆ ಗೋಲಿಬಾರ ಮಾಡಿಸಿದೆ. ಕೊಪ್ಪಳದಲ್ಲಿ ಕೂಲಿ ಕೇಳಿದ ರೈತರಿಗೆ ಲಾಟಿ ಏಟು ಕೊಟ್ಟಿದೆ. ಈ ಬಿಜೆಪಿ ಸರಕಾರ ರೈತ ವಿರೋಧಿಯಾಗಿದೆ ಎಂದು ಟಿಕಿಸಿದರು. 
ಕೊಪ್ಪಳ ಕ್ಷೇತ್ರದ ಬಡಜನರು, ರೈತರು ಕೆಲಸವಿಲ್ಲದೆ ಗುಳೆ ಹೋಗುತ್ತಿರುವಾಗ ಸಂಗಣ್ಣ ಕರಡಿ ತಮ್ಮನ್ನು ತಾವು ಮಾರಿಕೊಂಡು ಉಪಚುನಾವಣೆಗೆ ಕಾರಣರಾಗಿದ್ದಾರೆ. ಈ ಬೆಳವಣಿಗೆ ಕ್ಷೇತ್ರದ ಜನತೆಯನ್ನು ತಲೆತಗ್ಗಿಸುವಂತೆ ಮಾಡಿದೆ. ಮತದಾರರು ಸ್ವಾಭಿಮಾನ ಉಳಿವುಗಾಗಿ ಕಾಂಗ್ರೆಸ ಬೆಂಬಲಿಸಿ ಎಂದು ಮನವಿಮಾಡಿದರು. 
ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮಾಜಿ ಸಚಿವ ಹೆಚ್.ಕೆ.ಪಾಟಿಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಜಿ.ಪಂ ಸದಸ್ಯರಾದ ಟಿ. ಜನಾರ್ಧನ, ವಿಜಯಲಕ್ಷ್ಮೀ ರಾಮಕೃಷ್ಣ , ಹೊಸಪೇಟೆ ಯುವ ಮುಖಂಡ ದೀಪಕ ಸಿಂಗ್, ಗಂಗಾವತಿ ನಗರಸಭೆ ಅಧ್ಯಕ್ಷ ಬಸಪ್ಪ ನಾಯಕ ಭಾಗವಹಿಸಿದ್ದರು. ನಂತರ ಕಂಪಸಾಗg,  ಹುಲಿಗಿ, ಹೊಸಳ್ಳಿ ಪ್ಯಾಕ್ಟರಿ ಏರಿಯಾ, ನಿಂಗಾಪೂರ, ಹೊಸಳ್ಳಿ, ಮುನಿರಾಬಾದ ಡ್ಯಾಂ ನಲ್ಲಿ ಕಾಂಗ್ರೆಸ ಅಭ್ಯರ್ಥಿ ಬಸವರಾಜ ಹಿಟ್ನಾಳ ಪರ ಪ್ರಚಾರ ನಡೆಸಿದರು.
Please follow and like us:
error