ಶಾಂತಿ-ಸೌಹಾರ್ದತೆಯಿಂದ ರಂಜಾನ್ ಆಚರಣೆಗೆ ಮನವಿ.

ಕೊಪ್ಪಳ, ಜು.೧೬  ಕೊಪ್ಪಳ ಜಿಲ್ಲಾದ್ಯಂತ ಜು.೧೮ ರಂದು ನಡೆಯಲಿರುವ   ರಂಜಾನ್ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಕೊಪ್ಪಳ ಡಿವೈಎಸ್‌ಪಿ ರಾಜೀವ್ ಅವರು ಮನವಿ ಮಾಡಿಕೊಂಡರು.ರಂಜಾನ್ ಹಬ್ಬ ಆಚರಣೆ ಸಂಬಂಧ ಕೊಪ್ಪಳ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ರಂಜಾನ್ ಹಬ್ಬವನ್ನು ಯಾವುದೇ ಜಾತಿ ಬೇಧ, ಭಾವವಿಲ್ಲದೇ ಶಾಂತಿ-ಸೌಹಾರ್ದಯುತವಾಗಿ ಆಚರಿಸುವಂತೆ ಅವರು ಎಲ್ಲ ಸಮಾಜಗಳ ಮುಖಂಡರುಗಳಿಗೆ ಮನವಿ ಮಾಡಿಕೊಂಡರು.
     ಸಭೆಯಲ್ಲಿ ಸೇರಿದ್ದ ಕೊಪ್ಪಳ ಮತ್ತು ಭಾಗ್ಯನಗರದ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರು ಭಕ್ತಿ ಭಾವದಿಂದ, ಶಾಂತಿ ಸೌಹಾರ್ದಯುತವಾಗಿ ರಂಜಾನ್ ಹಬ್ಬ ಆಚರಿಸಲು ಸಕಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
     ಸಭೆಯಲ್ಲಿ ನಗರ ಠಾಣೆ ಪಿ.ಐ ಮೋಹನ್‌ಪ್ರಸಾದ, ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್, ಸಂಚಾರಿ ಠಾಣೆ ಪಿ.ಎಸ್.ಐ ಗಳಾದ ಪುಲ್ಲಯ್ಯ, ಬೂದೆಪ್ಪ, ನಗರ ಠಾಣೆ ಪಿ.ಎಸ್.ಐ ಫಕೀರಮ್ಮ, ಮುಖಂಡರಾದ ಶಾಂತಣ್ಣ ಮುದಗಲ್, ಅಮ್ಜದ್ ಪಟೇಲ್, ಕೆ.ಎಂ.ಸೈಯದ್, ಬಾಳಪ್ಪ ಬಾರಕೇರ, ಗೌಸುಸಾಬ ಸರ್ದಾರ ಸೇರಿದಂತೆ ಕೊಪ್ಪಳ ಹಾಗೂ ಭಾಗ್ಯನಗರದ ಹಿರಿಯ ಮುಖಂಡರು ಭಾಗವಹಿಸಿದ್ದರು.  

Related posts

Leave a Comment