fbpx

ತಿಗರಿ ಏತನೀರಾವರಿ ಕಾಮಗಾರಿ ಕಳಪೆ-ಶರಣಪ್ಪ ನಿಟ್ಟಾಲಿ.

ಕೊಪ್ಪಳ- ತಾಲೂಕಿನ ತಿಗರಿ ಏತನೀರಾವರಿ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ ಎಂದು ಸಮಾಜ ಸೇವಕ ಶರಣಪ್ಪ ನಿಟ್ಟಾಲಿ ಹಾಗೂ ತಿಗರಿ ಗ್ರಾಮದ ದೇವಪ್ಪ ಕವಲೂರು  ಸಣ್ಣ ನೀರಾವರಿ ಇಲಾಖೆಯ ಎಇಇಗೆ ದೂರು ಸಲ್ಲಿಸಿದ್ದಾರೆ.
ಈ ಕಾಮಗಾರಿಗೆ ಸರಕಾರ ಸಾಕಷ್ಟು ಹಣ ನೀಡಿದರೂ ಕಾಮಗಾರಿ ಮಾತ್ರ ಸಂಪೂರ್ಣ ಕಳಪೆಯಾಗಿದೆ ಇಲ್ಲಿಯ ಸೀಳು ಕಾಲುವೆಗಳು ಈಗಾಗಲೇ ಅಲ್ಲಲ್ಲಿ ಕುಸಿದು ಹೋಗಿವೆ,ಇದಕ್ಕೆ ಗುಣಮಟ್ಟದ ಸಾಮಗ್ರಿಗಳು ಬಳಸದೇ ಅಲ್ಲಿಯ ಸಮೀಪದ ಭೈರಾಪೂರು ಗ್ರಾಮದ ದಪ್ಪವಾದ ಮರಳು ಬಳಕೆಯಾಗಿದೆ, ನಿರ್ದಿಷ್ಠ ಪ್ರಮಾಣದ ಸಿಮೇಂಟ್ ಬಳಕೆಯಾಗದೇ ಕಾಮಗಾರಿ ಬೇಕಾಬಿಟ್ಟಿಯಾಗಿದೆ, ಅಲ್ಲಿಯ ಏತನೀರಾವರಿಯ ಪಂಪ್ ಹೌಸ್ ರೂಂಗೆ ಸಹ ನಿರ್ದಿಷ್ಠ ಪ್ರಮಾಣದ ಮರಳು-ಸಿಮೇಂಟ್ ಬಳಕೆಯಾಗಿಲ್ಲ ಎಂದು ಗ್ರಾಮಸ್ಥರ ಹೇಳುತ್ತಾರೆ. ಪಂಪ್ ಹೌಸ್‌ಗೆ ನೀರು ಬರುವ ಕಾಲುವೆಯ ಊಳು ತೆಗೆದಿದ್ದೇವೆ ಎನ್ನುತ್ತಾರೆ ಅಲ್ಲಿ ಗಮನಿಸಿದರೆ ಯಾವುದೇ ಊಳು ತೆಗೆದ ಬಗ್ಗೆ ಎಲ್ಲಿ ಕಾಣುವುದಿಲ್ಲ ಹೀಗಾಗಿ ಈ ಕಾಮಗಾರಿಗೆ ಯಾವುದೇ ಕಾರಣಕ್ಕೂ ಅನುದಾನ ಬಿಡುಗಡೆಯಾಗಬಾರದು ಇದು ಸಂಪೂರ್ಣ ತನಿಖೆಯಾಗಬೇಕು, ತನಿಖೆಯಾಗದೇ ಒಂದು ವೇಳೆ ಅನುದಾನ ಬಿಡುಗಡಯಾದರೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.  ಇಂಥಹ ಕಳಪೆ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ್ ತಂಗಡಗಿಯವರು ಗಮನಹರಿಸದಿರುವುದು ಆಶ್ಚರ್ಯ ಸಂಗತಿ.

Please follow and like us:
error

Leave a Reply

error: Content is protected !!