ಸಾಮ್ರಾಜ್ಯಶಾಹಿ ಅಮೇರಿಕಾ ಒಬಾಮ ಪ್ರತಿಕೃತಿ ದಹಿಸಿ ಪ್ರತಿಭಟನೆ

ಸಂವಿಧಾನ ಜಾರಿಯ ದಿನವಾದ ಜನೇವರಿ ೨೬ ರ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಹೆಸರಿನಲ್ಲಿ ಆಮಂತ್ರಿತನಾದ ಸಾಮ್ರಾಜ್ಯಶಾಹಿ ಅಮೆರಿಕಾದ ಬರಾಕ್ ಒಬಾಮನ ಭಾರತ ಬೇಟಿಯನ್ನು ಸಿಪಿಐ(ಎಂಎಲ್) ತೀವ್ರವಾಗಿ ವಿರೋಧಿಸಿ ಪ್ರತಿಭಟಿಸಿತು.
 ಜಿಲ್ಲಾ ಕಾರ್ಯದರ್ಶಿ ಕೆ ಬಿ ಗೋನಾಳ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ವಿಶ್ವದ ಅನೇಕ ದೇಶಗಳ ಸಾರ್ವಭೌಮತೆಯ ಮೇಲೆ ದಾಳಿ ಮಾಡುತ್ತಿರುವ, ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ತಂತ್ರ ಕುತಂತ್ರಗಳ ಮೂಲಕ ನಮ್ಮ ದೇಶವನ್ನು ಲೂಟಿಗೆ ಮುಕ್ತಗೊಳಿಸುವತಂಹ ಒತ್ತಡ ಹೇರಲು ಬರತ್ತಿರುವ ಒಬಾಮನು, ಹತ್ತು ಹಲವು ಒಪ್ಪಂದಗಳನ್ನು ಮಾಡಿಕೊಳ್ಳುವದು ದೇಶಿ ಸ್ವಾಭೀಮಾನ ಕೆಣಕಿದೆ. ಕಾರ್ಪೋರೇಟ್ ಕಂಪನಿಗಳನ್ನು ಬಲಪಡಿಸುವ ಉದ್ದೇಶದಿಂದ ನರೇಂದ್ರ ಮೋದಿ ದೇಶದ ಸಾರ್ವಭೌಮತೆಯನ್ನು ಮತ್ತು ಅನರ್ಘ್ಯ ಸಂಪನ್ಮೂಲವನ್ನು ಚಿನ್ನದ ತಟ್ಟೆಯಲ್ಲಿಟ್ಟು ಒಬಾಮನ ಅಡಿಗೆ ಸಲ್ಲಿಸುತ್ತಿರುವ ವಿಷಯ ಗುಟ್ಟಾಗಿ ಉಳಿಯಲ್ಲಿಲ್ಲ. ಆದರೆ ಕೋಮುಗಳನ್ನು ಪ್ರಚೋಧಿಸಿ ಅಧಿಕಾರಕ್ಕೆ ಬಂದು ಅದಾನಿ,ಅಂಬಾನಿ, ಟಾಟ ನತಂಹವರ ಹಿತ ಖಾತರಿಪಡಿಸುತ್ತಿರುವ ಮೋದಿ ನೀತಿಯನ್ನು ವಿರೋಧಿಸಿ ಪಕ್ಷ ಬೇಧವಿಲ್ಲದೆ ಬೀದಿಗಿಳಿಯಲು ಕರೆ ನೀಡಿದರು.
       ಒಬಾಮ ಹಾಗೂ ಮೋದಿ ಸರ್ಕಾರದ ವಿರುದ್ದ ಧಿಕ್ಕಾರದ ಆಕ್ರೋಶಭರಿತ ಘೋಷಣೆ ಕೂಗಿ ಕ್ರಾಂತಿಕಾರಿ ಹಾಡಗಳನ್ನು ಹಾಡುತ್ತಾ ಭೂತ ದಹನ ಮಾಡಲಾಯಿತು. ಮಂಜುನಾಥ ಚಕ್ರಸಾಲಿ ವಕೀಲರು, ಹನುಮೇಶ ಪೂಜಾರ ಹಾಗೂ ಹೇಮರಾಜ ವೀರಾಪೂರ,ಬಸವರಾಜ ನರೇಗಲ್, ಮಾತನಾಡಿದರು. ಪ್ರತಿಭಟನೆಯಲ್ಲಿ ಮಲ್ಲಿಕಾ ಪೂಜಾರ, ವಿದ್ಯಾ ನಾಲವಾಡ್, ಚೇತನ ಪಾಸ್ತೆ, ಇಂದ್ರಪ್ಪ ಹೂವಿನಾಳ, ಪ್ರಕಾಶ ಹೊಳೆಯಪ್ಪನವರು, ಮುತ್ತಣ ಸಂಗನಾಳ ನೇತೃತ್ವ ವಹಿಸಿದ್ಧರು.

Leave a Reply