ನಮ್ಮನ್ನು ಕೊಂದುಕೊಂಡು ಇನ್ನೊಬ್ಬರನ್ನು ಬದುಕಿಸಬೇಕೆ?

ತಮಿಳುನಾಡಿಗೆ ಕಾವೇರಿ ನೀರು!

ಕೊಪ್ಪಳ : ಬರಗಾಲದಿಂದ ಇಡೀ ಕರ್ನಾಟಕವೇ ತತ್ತರಿಸುತ್ತಿರುವಾಗ, ಕಾವೇರಿ ನದಿ ಪಾತ್ರದಲ್ಲಿ ಬೆಳೆಗಳಿಗೆ ಮತ್ತು ಕುಡಿಯಲಿಕ್ಕೆ ನೀರಿನ ಕೊರತೆ ಇರುವಾಗ ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ ಎಂದು ಇಲ್ಲಿಯ ಪ್ರಗತಿಪರ ಸಂಘಟನೆಯಿಂದ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಅಗಸ್ಟ್-೪ ರಂದು ಮನವಿ ಸಲ್ಲಿಸಿದೆ.
ಕಾವೇರಿಯಲ್ಲಿ ನೀರಿನ ಪ್ರಮಾಣ ಮತ್ತು ಇಲ್ಲಿಯ ಪರಿಸ್ಥಿತಿ ಗಮನಿಸಿ ತಮಿಳುನಾಡಿಗೆ ನೀರು ಬಿಡಲು ಆದೇಶಿಸಬೇಕೆ ಹೊರತು. ನಮಗಿಲ್ಲದಿದ್ದರೂ ಸರಿ ಬೇರೆಯವರಿಗೆ ನೀರು ಬಿಡಿ ಎನ್ನುವುದು ನ್ಯಾಯ ಸಮ್ಮತವಲ್ಲ. ಇದು ನಮ್ಮವರನ್ನು ಕೊಂದುಕೊಂಡು ಇನ್ನೊಬ್ಬರನ್ನು ಬದುಕಿಸಿರಿ ಎಂದಂತಾಗುತ್ತದೆ. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ತಪ್ಪಿವೆ. ಇದನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ವಿಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ, ಡಿ.ಎಚ್. ಪೂಜಾರ, ಜೆ. ಭಾರದ್ವಾಜ, ಎಚ್. ರಘು ಎಂ.ಆರ್. ವೆಂಕಟೇಶ ಮತ್ತು ಎಚ್. ತಿಪ್ಪಯ್ಯ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು.

Please follow and like us:
error