ತಂಗಡಗಿ ವೇದಿಕೆಯಿಂದ ವಿಷ್ಣುವರ್ಧನ ಹುಟ್ಟುಹಬ್ಬ ಆಚರಣೆ

ಕೊಪ್ಪಳ, ಸೆ. ೧೮. ಕನ್ನಡ ಚಲನಚಿತ್ರರಂಗದ ಮೇರುನಟ ಡಾ|| ವಿಷ್ಣುವರ್ಧನರವರ ಹುಟ್ಟುಹಬ್ಬವನ್ನು ನಗರದ ಬಾಲಿಕೆಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ಯುವಚೇತನ ಶ್ರೀ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಚಲನಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಮಾತನಾಡಿ ಕೊಪ್ಪಳ ಬೆಳ್ಳಿ ಮಂಡಲ ಮಂಜುನಾಥನ ನೇತೃತ್ವದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ, ವಿಷ್ಣುವರ್ಧನರವರ ಪರಿಚಯ ಮಾಡಿದ ಅವರು, ಚಲನಚಿತ್ರ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತ ವಿಷ್ಣುವರ್ಧನರವರ ಸ್ಮಾರಕ ಬೆಂಗಳೂರಿನಲ್ಲಿಯೇ ಆಗಲಿ, ಅಂದಾಗ ಮಾತ್ರ ಬಹಳಷ್ಟು ಸಂಖ್ಯೆಯಲ್ಲಿ ಜನರಿಗೆ ನೋಡುವ ಭಾಗ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳಲಿ ಅದಕ್ಕೆ ವಿಷ್ಣು ಕುಟುಂಬ ಮತ್ತು ಅಭಿಮಾನಿಗಳು ಸಾಥ್ ನೀಡಲಿ ಎಂದರು.
ಕಾರ್ಯಕ್ರಮ ಸಂಘಟಕ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡುತ್ತ,  ಚಲನಚಿತ್ರ ರಂಗದಲ್ಲಿ ವಿಷ್ಣುವರ್ಧನರವರು ಮತ್ತು ಅವರ ಕುಟುಂಬ ಉತ್ತಮ ಕೆಲಸ ಮಾಡಿದೆ, ಅವರ ಕುಟುಂಬದೊಂದಿಗೆ ಸಂಪರ್ಕವಿರುವದು ನನಗೆ ಹೆಮ್ಮೆ ಅನಿಸುತ್ತದೆ, ಅವರದೊಂದು ಸಭ್ಯ ಕುಟುಂಬ ಎಂದ ಅವರು ಸಚಿವ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆಯನ್ನು ರಾಜ್ಯದ ಪ್ರತಿ ತಾಲೂಕಿನಲ್ಲಿ ಸಂಘಟಿಸಿ ಸದಭಿರುಚಿಯ ಕಾರ್ಯಕ್ರಮಗಳನ್ನು ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಖ್ಯಾತ ಗಾಯಕ ಸದಾಶಿವ ಪಾಟೀಲ ಚಲನಚಿತ್ರ ಗೀತೆ ಹಾಡಿ ಮನರಂಜಿಸಿದರು, ವೀರ ಕನ್ನಡಿಗ ಸಂಘದ ಶಿವಾನಂದ ಹೊದ್ಲೂರ ಚಲನಚಿತ್ರ ರಂಗ  ಕುರಿತು ಮಾತನಾಡುತ್ತ ೬೦ ವರ್ಷದ ಚಿತ್ರರಂಗದ ಬೆಳವಣಿಗೆ ಮತ್ತು ಇಂದಿನ ಸ್ಥಿತಿ ಕುರಿತು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶಾಲೆಯ ಉಪಪ್ರಾಂಶುಪಾಲರು ಮಾತನಾಡಿ ತಮ್ಮ ಹಳೆಯ ದಿನಗಳನ್ನು ನೆನಸಿಕೊಂಡರು.

Please follow and like us:
error