ಕೊಪ್ಪಳ: ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಜ.೨೧ರಂದು ಬೆಳಗ್ಗೆ ೧೧ಘಂಟೆಗೆ ಸರ್ಕಾರಿ ಅಂಗವಿಕಲ ನೌಕರರ ವೈದ್ಯಕೀಯ ತಪಾಸಣೆ ಶಿಭಿರ,ರೈಲ್ವೇ ಪಾಸು ಮತ್ತು ೧೦ವರ್ಷ ಅವಧಿಯ ಅಂಗವಿಕಲ ಗುರುತಿನ ಚೀಟಿ ವಿತರಣೆಯ ಕಾರ್ಯಕ್ರಮವನ್ನು ಮತ್ತು ಸಿ.ಪಿ.ಎಸ್.ಶಾಲೆ ಎರಡು ಶಾಲಾ ಕಟ್ಟದ ಉದ್ಘಾಟನೆಯ,೧೯೯೫ರ ಅಂಗವಿಕಲರ ಅಧಿನಿಯದ ಕುರಿತು ಉಪನ್ಯಾಸ ಕಾರ್ಯಗಾರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಭಾಗವಹಿಸುವ ನೌಕರರಿಗೆ ಅನ್ಯ ಕಾರ್ಯ ನಿಮಿತ್ಯ ರಜೆಯ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಶಿಘ್ರೇವೆ ರಜೆಯ ಸೌಲಭ್ಯ ಮಂಜೂರಾಗಲಿದ್ದು,ಜಿಲ್ಲೆ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಂಗವಿಕಲ ನೌಕರರು ಇದರ ಉಪಯೋಗ ಪಡಿಸಿಕೊಳ್ಳವಂತೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮತ್ತು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಮನಿ ತಿಳಿಸಿದ್ದಾರೆ.
ಜ.೨೧ರಂದು ವೈದ್ಯಕೀಯ ತಪಾಸಣೆ ಶಿಭಿರ ಮತ್ತು ಶಾಲಾ ಕಟ್ಟದ ಉದ್ಘಾಟನೆ
Leave a Reply
You must be logged in to post a comment.