ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ :

 ಸಾರ್ವಜನಿಕರಿಗೆ ಸೂಚನೆ
  ಸಾಮಾಜಿಕ ಆರ್ಥಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಇಚ್ಛೆಪಡದ ಕುಟುಂಬಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
  ರಾಜ್ಯದಲ್ಲಿ ಎರಡು ಹಂತಗಳಲ್ಲಿ ತೆಗೆದುಕೊಂಡಿರುವ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-೨೦೧೧ ಮುಕ್ತಾಯದ ಹಂತ ತಲುಪಿದೆ.  ಈಗ ಮೇಲ್ವಿಚಾರಕರಿಂದ ಮರು ಪರಿಶೀಲನಾ ಕಾರ್ಯ ನಡೆದಿದೆ.  ಈ ಹಂತದಲ್ಲಿ ಗಣತಿ ವೇಳೆ ಉಪಸ್ಥಿತರಿಲ್ಲದ ಕುಟುಂಬದ ಮನೆಗಳು / ಬೀಗ ಹಾಕಿದ ಮನೆಗಳು/ ದೂರದ ಪ್ರದೇಶಘಳಿಗೆ ವಲಸೆ ಹೋಗಿದ್ದ ಕುಟುಂಬಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.  ಗಣತಿ ಅಂಕಿ ಅಂಶಗಳ ಕರಡು ಪಟ್ಟಿ ಪ್ರಕಟಣೆಯನ್ನು ಜುಲೈ ೦೧ ರ ನಂತರ ಮಾಡಲಾಗುವುದು.  ಸಾಮಾಜಿಕ ಆರ್ಥಿಕ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಛೆಪಡದ ಕುಟುಂಬಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  ಇಂತಹ ಅರ್ಜಿ ನಮೂನೆಗಳನ್ನು ಜುಲೈ ೦೧ ರ ಒಳಗಾಗಿ ಆಯಾ ತಹಸಿಲ್ದಾರರ ಕಚೇರಿ, ನಗರ ಪ್ರದೇಶದವರು ನಗರಸಭೆ ಪೌರಾಯುಕ್ತರು, ಪಟ್ಟಣ ಪ್ರದೇಶದವರು ಆಯಾ ಪುರಸಭೆ/ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳ ಕಚೇರಿ ಯಲ್ಲಿ ಲಭ್ಯವಿರುವ ನಮೂನೆಯಲ್ಲಿ ನೀಡಬೇಕು.  ಅಲ್ಲದೆ ನಮೂನೆಗಳು www.rdpr.kar.nic.in ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುತ್ತವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ  ತಿಳಿಸಿದೆ.
Please follow and like us:
error