ಕೊಪ್ಪಳ ಜಿಲ್ಲೆಯಾದ್ಯಂತ ಟಿಪ್ಪು ಸುಲ್ತಾನರ “ರಥ ಸಂಚಲನ”

ಮೈಸೂರು ಹುಲಿ ಟಿಪ್ಪು ಸುಲ್ತಾನ ಅಭಿಮಾನಿ ಬಳಗ ತಳಕಲ್ಲ   
ಕೊಪ್ಪಳ :- ದಿನಾಂಕ ೧೨-೦೩-೨೦೧೩ ಮಂಗಳವಾರದಿಂದ  ದಿನಾಂಕ ೧೬-೦೩-೨೦೧೩ ಶನಿವಾರದ ವರೆಗೆ  
ಯಲಬುರ್ಗಾ ತಾಲೂಕ ತಳಕಲ್ ಗ್ರಾಮದ ಟುಪ್ಪು ಸುಲ್ತಾನ ಅಭಿಮಾನಿಗಳ ಬಳಗದಿಂದ ಟಿಪ್ಪು ಜಯಂತಿಯ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಕೊಪ್ಪಳ ಜಿಲ್ಲೆಯ ತಳಕಲ್ ಗ್ರಾಮದಿಂದ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಕಛೇರಿಯವರೆಗೂ ಪಾದಾಯಾತ್ರೆಯನ್ನು ಈಗಾಗಲೇ  ಕೈಗೊಂಡಿದ್ದೆವು. ಅದರ ಮನವಿ ಪತ್ರವನ್ನು ಸಹ ಜಿಲ್ಲಾಧಿಕಾರಿಗಳ  ಮುಖಾಂತರ ಮಾನ್ಯ ಮುಖ್ಯಮಂತ್ರಿ ಹಾಗೂ ರಾಜ್ಯಪಾಲವರಿಗೆ ಸಲ್ಲಿಸಲಾಗಿತ್ತು. ಈ ಬೇಡಿಕೆಯನ್ನು ಸರಕಾರಕ್ಕೆ ಪುನರ್ ನೆನಪಿಸುವುದಕ್ಕಾಗಿ ಈ ರಥ ಸಂಚಲನ ಹೋರಾಟವನ್ನು ಕೈಗೊಂಡಿದ್ದೆವೆ. 
ಈರಥ ಸಂಚಲನವು ಟಿಪ್ಪು ಸುಲ್ತಾನ ಅಭಿಮಾನಿ ಬಳಗ ತಳಕಲ್ ಗ್ರಾಮದಿಂದ ಹೊರಟು ಕುಕನೂರು, ಯಲಬುರ್ಗಾ, ಕುಷ್ಟಗಿ, ತಾವರಗೇರ, ಕನಕಗಿರಿ, ಕಾರಟಗಿ, ಗಂಗವತಿ  ಮುಖಾಂತರ ಕೊಪ್ಪಳದವರೆಗೆ ಚಲಿಸಿ ಕೊನೆಗೆ ಜಿಲ್ಲಾ ಕಛೇರಿಯಲಲ್ಲಿ ಮನವಿ ಪತ್ರ ಸಲ್ಲಿಸಿ ತಳಕಲ್ ಗ್ರಾಮದಲ್ಲಿ ಕೊನೆಗೊಳ್ಳುವುದು. 
ಈ ಸದ್ಬಾವನೆಯ ರಥಸಂಚಲನಕ್ಕೆ ಸಮಸ್ತ ಟಿಪ್ಪು ಸುಲ್ತಾನ್ ಅಭಿಮಾನಿಗಳು ಭಾಗವಹಿಸಬೇಕೆಂದು ಎಸ್ ಆಸೀಫ್ ಅಲಿ ವಕೀಲರು,ಮುರ್ತುಜಾಸಾಬ.ಡಿ.ನೂರಬಾಷಾ,ಶಮ್ಶುದ್ದೀನ್ ( ಸಮೀರ್ ) ವಾಯ್ ನದಾಫ್,ಮೌಲಾಹುಸೇನ ಜಿ. ಸಬರದ  ವಿನಂತಿಸಿಕೊಂಡಿದ್ದಾರೆ.
Please follow and like us:
error