You are here
Home > Koppal News > ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು-ರಾಘವೇಂದ್ರ ಹಿಟ್ನಾಳ

ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು-ರಾಘವೇಂದ್ರ ಹಿಟ್ನಾಳ

ಕೊಪ್ಪಳ,ಜ.೧೪: ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳಿಸುವಲ್ಲಿ ಹಾಗೂ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕೆಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. 
ಅವರು ನಗರದ ಬನ್ನಿಕಟ್ಟಿ ಸರ್ಕಾರಿ ಪೌಢಶಾಲೆ ಮತ್ತು ಆ ದರ್ಶ ಮಾಹಾವಿದ್ಯಾಲಯದಲ್ಲಿ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ ೮೪೧ನೇ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ ಆಚರಣೆಯಲ್ಲಿ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಿಸಿ ಮಾತನಾಡುತ್ತ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ ಕೇಂದ್ರ ಸರ್ಕಾರ ಆರ್ ಎಂ ಎಸ್ ಯೋಜನೆ ಅಡಿಯಲ್ಲಿ ಶಿಕ್ಷಣ ಹಕ್ಕು ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಉಚಿತವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಟ ಬುಕ್ಕ್ ,ಸಮವಸ್ತ್ರ, ಬಿಸಿಊಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿದೆ ಎಂದರು. 

ಮುಂದುವರಿದು ಮಾತನಾಡಿದ ಅವರು ಶಾಲಾ ದಾಖಲಾತಿ ಹೆಚ್ಚಿಸಲು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸರ್ಕಾರ ವಿಶೇಷ ಕಾಳಜಿ ನೀಡಿ ಪ್ರತಿದಿನ ಹಾಜರಿಗೆ ಅನುಗುಣವಾಗಿ ೨ ರೂ. ಪ್ರೋತ್ಸಹ ಧನ ಜಾರಿಗೊಳಿಸಿದೆ ಇದರ ಸದುಪಯೋಜ ಪಡೆದುಕೊಳ್ಳಬೇಕು. ಶಿಕ್ಷಕರು ಶೇ. ೧೦೦ರಷ್ಟು ಹಾಜರಾತಿ ತರುವಲ್ಲಿ ಮಕ್ಕಳಿಗೆ ಪ್ರೇರೆಪಿಸಬೇಕು ಮತ್ತು ಗುಣಮಟ್ಟದ ಶಿಕ್ಷಣ ನೀಡಬೇಕು ಕಳೆದ ಸಾರಿ ನಮ್ಮ ಜಿಲ್ಲೆಯೂ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ೧೬ನೇ ಸ್ಥಾನ ಪಡೆದಿತ್ತು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಟಾಪ್ ೧೦ ಒಳಗಾಗಿ ಸ್ಥಾನಗಳಿಸಬೇಕು. ನಮ್ಮ ಜಿಲ್ಲೆ ಶೈಕ್ಷಣಿಕ ಜಿಲ್ಲೆಯಾಗಿ ಸೆರ್ಪಡೆಗೊಳ್ಳಲುವಿದ್ಯಾರ್ಥಿಗಳು ನಿರಂತರ ಪರಿಶ್ರಮ ಪಡಬೇಕು ಹಾಗೂ ಶಿಕ್ಷಕರು ಹೆಚ್ಚಿನ  ಮುತುವರ್ಜಿ ವಹಿಸಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. 
ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಮಾತನಾಡಿ ಮಕ್ಕಳು ಶಿಕ್ಷಣದ ಪೂರಕವಾಗಿ ಮಕ್ಕಳು ಶಾಲೆ ಬಿಡಬಾರದು ಎಂಬ ಉದ್ದೇಶದಿಂದ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುವ ಯೋಜನೆ ಜಾರಿಗೆ ತಂದಿದೆ. ಇದನ್ನು ದುರುಪಯೋಗ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಸರ್ಕಾರ ಜಾರಿಗೆ ತಂದ ಈ ಯೋಜನೆ ಸಾರ್ಥಕವಾಗುತ್ತದೆ. ಒಬ್ಬ ವಿದ್ಯಾರ್ಥಿಗೆ ಸರ್ಕಾರ ಒಂದು ವರ್ಷಕ್ಕೆ ಶೈಕ್ಷಣಿಕ ಸಲುವಾಗಿ ೧೦ರಿಂದ ೧೫ ಸಾವಿರ ರೂ.ಗಳ ವರೆಗೆ ಖರ್ಚು ಮಾಡುತ್ತದೆ. ವಿದ್ಯಾರ್ಥಿಗಳ ಪಾಲಕರು ಜಾಗ್ರತೆ ವಹಿಸಿ ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಿಸುವಲ್ಲಿಸರ್ಕಾರ ಮತ್ತು ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಉಮೇಶ ಪೂಜಾರ ಮನವಿ ಮಾಡಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಪರಮಾನಂದ ಯಾಳಗಿ ಮಾತನಾಡಿ ಕೇವಲ ೬ ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಸರ್ಕಾರಿ ಪ್ರೌಢಶಾಲೆ ಜಿಲ್ಲೆಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವರ್ಗ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸುಸರ್ಜ್ಜಿತ ಕಟ್ಟಡದೊಂದಿಗೆ ಶಾಲೆಗೆ ಕಂಪೌಂಡ್ ಅವಶಕತೆ ಇದೆ ಕಂಪೌಂಡ್ ನಿರ್ಮಾಣ ಸೇರಿ ಹೆಚ್ಚುವರಿಯಾಗಿ ೩ ಕೊಠಡಿಗಳಿಗೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಲು ಶಾಸಕರು ತಮ್ಮ ನಿಧಿಯಿಂದ ವಿಶೇಷ ಅನುದಾನ ಒದಗಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. 
ವೇದಿಕೆ ಮೇಲೆ ಶಾಲೆಯ ಮುಖ್ಯ ಗುರುಗಳಾದ ಮಾಹಾಂತೇಶ, ಕರಿಬಸಪ್ಪ ಪಲೇದ್, ಮರ್ದಾನಪ್ಪ ಬಿಸರಳ್ಳಿ, ನಗರಸಭಾ ಸದಸ್ಯ ಪ್ರಾಣೇಶ ಮಹೇಂದ್ರಕರ ಎಸ್‌ಡಿಎಂಸಿ ಸದಸ್ಯ ಮಲ್ಲಿಕಾರ್ಜುನ ಪ್ರಭು ಶೆಟ್ಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Leave a Reply

Top