ಕೊಪ್ಪಳ ನಗರದಲ್ಲಿ ೨೫ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಪೂಜ್ಯ ಶ್ರೀ ಮ.ನಿ.ಪ್ರ.ಜ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ದಿವ್ಯ ಸಂಕಲ್ಪದಂತೆ ಬಿಸಿಲಿನ ನಾಡಾದ ಕೊಪ್ಪಳವನ್ನು ಹಸಿರಿನ ತಾಣವಾಗಿಸುವ ನಿಟ್ಟಿನಲ್ಲಿ ಕೊಪ್ಪಳ ನಗರದಲ್ಲಿ ೨೫ ಸಾವಿರ ಸಸಿಗಳನ್ನು ನೆಟ್ಟು ಹಸಿರಿನ ವಾತವರಣವನ್ನು ನಿರ್ಮಿಸುವ ಕಾರ್ಯ ಕೈಗೊಂಡಿರುವುದು ನಮಗೆಲ್ಲ ತಿಳಿದಿರುವ ಸಂಗತಿ. ಮತ್ತೆ ಈ ವರ್ಷವೂ ಸಹ ಸಸಿಗಳನ್ನು ನೆಡುವ ಕಾರ್ಯವು ಶ್ರೀ ಗವಿಮಠದ ಪೂಜ್ಯರಾದ ಶ್ರೀ.ಮ.ನಿ.ಪ್ರ.ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲಾಡಳಿತ, ನಗರಸಭೆ, ಅರಣ್ಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಪರಿಸರ ಪ್ರಿಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದಲ್ಲಿ ೨೫ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ದಿ : ೦೩-೦೭-೨೦೧೩ ರ ಬುಧವಾರದಿಂದ ರಿಂದ ೦೭-೦೭-೨೦೧೩  ರ ರವಿವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಕಾರಣ ಎಲ್ಲಾ ನಾಗರಿಕರು ಈ ಐತಿಹಾಸಿಕ, ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಈ ಮೂಲಕ ತಿಳಿಸಲಾಗಿದೆ. ಪ್ರತಿಯೊಬ್ಬರು ವರ್ಷಕ್ಕೊಂದಾದರೂ ಮರ ನೆಟ್ಟು ನಿಸರ್ಗದ ಋಣ ತೀರಿಸುವ ಪುಣ್ಯ ಕಾರ್ಯ ಮಾಡೋಣ.

Leave a Reply