fbpx

ಅನಧಿಕೃತವಾಗಿ ಮಧ್ಯ ಸಂಗ್ರಹ, ಮಾರಾಟ ತಡೆಗಟ್ಟಲ ಆಗ್ರಹ

ಜಿಲ್ಲೆಯಲ್ಲಿ ಅನಧಿಕೃತವಾಗಿ ಮಧ್ಯ ಸಂಗ್ರಹಿಸಿ ಮಾರಟ ಮಾಡುವುದನ್ನು ತಡೆಗಟ್ಟಿ ಕಾನೂನು ಅಡಿಯಲ್ಲಿ ಕ್ರಮ ಕೈ ಗೊಳ್ಳಬೇಕೆಂದು ಒತ್ತಾಯಿಸಿ ಅಬಕಾರಿ ಉಪ ಆಯುಕ್ತಕರಿಗೆ ಕರವೇ ಜಿಲ್ಲಾ ಘಟಕದಿಂದ ಮನನಿ
ಕೊಪ್ಪಳ : ಕರ್ನಾಟ

ಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಘಟಕವು ಜಿಲ್ಲೆಯ ಡಾಬಾಗಳಲ್ಲಿ, ಚಹಾ ಅಂಗಡಿಗಳಲ್ಲಿ, ಡಬ್ಬಾ ಅಂಗಡಿಗಳಲ್ಲಿ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮಧ್ಯಮಾರಟ ಮಾಡುತ್ತಿರುವುದನ್ನು ಕಂಡು ಕಾಣದಂತೆ ಕುಳಿತಿರುವ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪನೀತಿಯನ್ನು ಕರವೇ ಖಂಡಿಸುತ್ತದೆ.

ಗ್ರಾಮೀಣ ಭಾಗದಲ್ಲಿ ಪರವಾನಿಗೆ ಇಲ್ಲದೆ, ಪರವಾನಿಗೆ ಪಡೆದ ಅಂಗಡಿಗಳಂತೆ ರಾಜಾ ರೋಷವಾಗಿ, ಆಕ್ರಮವಾಗಿ ಸಗಟುಗಟ್ಟಲೆ ಮಧ್ಯವನ್ನು ಸಂಗ್ರಹಿಸಿ ತಮ್ಮ ಮನ ಬಂದ ದರಕ್ಕೆ ಮಾರಾಟ ಮಾಡಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ಇದರಿಂದ ಸರ್ಕಾರದ ಮತ್ತು ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ರಾಷ್ಟ್ರದ ಭವಿಷ್ಯದ ಪ್ರಜೆಗಳಾದ ಇಂದಿನ ಯುವಕರು ಅಭಕಾರಿ ಇಲಾಖೆಯ ನಿರ್ಲಕ್ಷದಿಂದಾಗಿ ದಾರಿತಪ್ಪುತ್ತಿದ್ದಾರೆ. ಯುವ ಜನರ ಅದೋಗತಿಗೆ ಕಾರಣವಾಗುತ್ತಿರುವ ಈ ಅಕ್ರಮ ಮಧ್ಯ ಮಾರಾಟವನ್ನು ತಕ್ಷಣವೇ ತಡೆಯಬೇಕು. ಅಕ್ರಮವಾಗಿ ಮಧ್ಯ ಸಂಗ್ರಹಿಸಿ ಮಾರಾಟ ಮಾಡುವವರ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಜಿಲ್ಲೆಯ ಯುವಕರ ಬಡ ಕುಟುಂಬಗಳ ಅಭಿವೃದ್ದಿಗೆ ಮಾರಕವಾಗಿರುವ ಈ ದಂದೆಯನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಕರವೇ ಸ್ವಚ್ಛವಾತವರಣ ನಿರ್ಮಾಣ ಮಾಡಲು ಸಾರ್ವಜನಿಕ ಹಿತಾಸಕ್ತಿಗಾಗಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಈ ಮನವಿ ಪತ್ರದ ಮೂಲಕ ಎಚ್ಚರಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸನಗೌಡ ಪೋಲಿಸ್‌ಪಾಟೀಲ್, ಜಿಲ್ಲಾ ಸಂಚಾಲಕರಾದ ಬಿ.ಗಿರೀಶಾನಂದ ಜ್ಞಾನಸುಂದರ, ತಾಲೂಕ ಅಧ್ಯಕ್ಷರಾದ ಹನಮಂತ ಬೆಸ್ತರ, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ ಬ್ಯಾಹಟ್ಟಿ, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಪೃತ್ವಿರಾಜ ಚಾಕಲಬ್ಬಿ, ತಾಲೂಕ ಸಂಘಟನಾ ಕಾರ್ಯದರ್ಶಿಯಾದ ಚಂದ್ರುಶೇಖರ ಮುಂಡರಗಿ, ನಗರ ಅಧ್ಯಕ್ಷರಾದ ಗವಿಸಿದ್ದಪ್ಪ ಹಂಡಿ, ಕಾರ್ಯಕರ್ತರಾದ ನವೀನ ಬಿಡನಾಳ, ಮಹಾಬಳೇಶ ಇನ್ನು ಮುಂತಾದವರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!