fbpx

ಜಾಮೀಯಾ ನಿಜಾಮೀಯಾ ವತಿಯಿಂದ ವಿಶೇಷ ಪ್ರವಚನ ಕಾರ್ಯಕ್ರಮ ಯಶಸ್ವಿ

 ಸಮಾಜ ಸೇವಕ ಕೆ.ಎಂ.ಸಯ್ಯದ್‌ರಿಗೆ ಸನ್ಮಾನ
ಕೊಪ್ಪಳ,ಮಾ.೧೮: ೧೯ ಶತಮಾನದ ಅಜೀಮ್ ಇಸ್ಲಾಮಿ ಸ್ಕಾಲರ್ ಇಮಾಮ್ ಅಹೇಲೆ ಸುನ್ನತ್ ಮಜದೂ ದೀನ್-ವ-ಮಿಲ್ಲತ್ ಶೇಖ್-ಉಲ್-ಇಸ್ಲಾಂ ಇಮಾಮ್ ಮೊಹಮ್ಮದ್ ಅನ್ವಾರುಲ್ಲಾ ಫಾರುಕಿ ಅಲೈರೆಹಮತಿಕಾ ರವರ ಶತಮಾನೋತ್ಸವದ ಉರಸ್ ಅಂಗವಾಗಿ ವಿಶ್ವಾಧ್ಯಂತ ಸಮೀನಾರ್ ಸೇರಿದಂತೆ ಭವ್ಯ ಮೆರವಣಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ದ ನಿಮಿತ್ಯ ಕೊಪ್ಪಳದಲ್ಲಿ ಮಂಗಳವಾರ ನಗರಸಭೆಬಳಿ ಇರುವ ಹಳೇ ಈದ್ಗಾ ಮೈದಾನದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹೈದರಾಬಾದಿನ ಶೆಖ್-ಉಲ್-ಜಾಮೀಯಾ ನಿಜಾಮೀಯಾ ದ ಹಜರತ್ ಮುಫ್ತಿ ಖಲೀಲ್ ಅಹಮ್ಮದ ಸಾಹೇಬ ರವರ ದಿವ್ಯ ಸಾನಿಧ್ಯದಲ್ಲಿ ಈ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಈ ಟಿವಿ ಉರ್ದು ವಾರ್ತೆ ಚಾನಲ್ ನ ಪ್ರವಚನಕಾರ ಮುಫ್ತಿ ಸಯ್ಯದ್ ಜೀಯಾ ಉದೀನ್ ನಕ್ಷಬಂದಿ ಹೈದರಾಬಾದ್, ಕಲಬುರ್ಗಿಯ ಮುಫ್ತಿ ಸಯ್ಯದ್ ಅಬ್ದುಲ್ ರಶೀದ್ ಸಾಹೇಬ್ ಖಾದ್ರಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಪ್ರವಚನ ನೀಡಿದರು.  ಮಜಲೀಸೆ ತಹ ಫುಜ್ ಇಮಾನ್ ತಂಜಿಂ ಉಲ್ ಮಾಯೆ ಇಕ್ರಾಮ್ ಕೊಪ್ಪಳ ಹಾಗೂ ಕಾರ್ಯಕ್ರಮ ಸಂಘಟಕ ಮುಫ್ತಿ ನಜೀರ್ ಅಹಮ್ಮದ್ ಖಾದ್ರಿ ತಸ್ಕಿನಿ ರವರು ಆರಂಭದಲ್ಲಿ ಪ್ರಾಸ್ತಾವಿಕ ಭಾಷಣ  ಮಾಡಿದರು. ಜಿಲ್ಲಾವಕ್ಫಬೋರ್ಡ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಮುಸ್ತಫಾ ಕಮಾಲ್ ಪಾಷಾ ಕಿಲ್ಲೇದಾರ ಖಾದ್ರಿ-ತಸ್ಕಿನಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಮೌಲಾನಾ ವ ಹಾಫಿಜ್ ಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಇಲ್ಲಿನ ಸಮಾಜ ಸೇವಕ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಸೇರಿದಂತೆ ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ ಅವರಿಗೆ ಜಾಮೀಯಾ ನಿಜಾಮೀಯಾ ಹೈದರಾಬಾದ್ ವತಿಯಿಂದ ಸನ್ಮಾನಿಸಲಾಯಿತು. ಇದರಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಪಾಲ್ಗೊಂಡಿದ್ದರು.
 ಧಾರ್ಮಿಕ ಸೇವಾ ಪುಸ್ತಕ ಲೋಕಾರ್ಪಣೆ
ಕೊಪ್ಪಳ,ಮಾ,೧೮: ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ(ನಮಾಜ್)ಮಾಡಿಸುವವರ ಮತ್ತು ಅಜಾನ್ ಮಾಡುವ ಮೌಝನ್ ಹಾಗೂ ಖಾಜಿ ರವರ ಖಿಝಾವತ್ ಹಾಗೂ ಮುಲ್ಲಾರವರ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಾಗಿ ಕನ್ನಡ ಭಾಷೆಯಲ್ಲಿ ಪ್ರಥಮಬಾರಿಗೆ ಇಸ್ಲಾಮಿ ನೀತಿ, ನಿಯಮಯಳ್ಳ ಪುಸ್ತಕವನ್ನು ಕೊಪ್ಪಳದ ಈದ್ಗಾ ಮೈದಾನದಲ್ಲಿ ಜರುಗಲಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಈ ಮಹತ್ವದ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಜಿಲ್ಲಾ ವಕ್ಫಬೋರ್ಡ ಅಧ್ಯಕ್ಷ ಮೌಲಾನಾ ಮುಸ್ತಫಾ ಕಮಾಲ್ ಸಾಹೇಬ್ ರವರ ಸತತ ಪ್ರಯತ್ನದಿಂದ ಇಮಾಮತ್ ಮೌಜನಿ ಮುಲ್ಲಾ-ಖಿಜಾವತ್ ದಂತಹ ಸೇವೆಮಾಡಲು  ಈ ನೀತಿ. ನಿಯಮವುಳ್ಳ ಈ ಪುಸ್ತಕ ನಮ್ಮ ನಾಡಿನ ಇಮಾಮತ್ ಗಳಿಗೆ ಅನುಕೂಲವಾಗಲು ಕನ್ನಡ ಭಾಷೆಯ ಪುಸ್ತಕ ಪ್ರಕಟಗೊಳಿಸಲಾಗುತ್ತಿದೆ.
ಈಗಾಗಲೇ ಜಾಮೀಯಾ, ನಿಜಾಮೀಯಾಬಾನಿ, ಇಮಾಮ್ ಅನ್ವರುಲ್ಲಾ ಫಾರಿಕಿ(ರವರ ಆದೇಶದಂತೆ) ಈ ಪುಸ್ತಕದ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು ಈ ಹಿಂದೆ ಇದರ ಪರೀಕ್ಷೆಯನ್ನು ಜಾಮೀಯಾ, ನಿಜಾಮಿಯಾ ಹೈದರಾಬಾದ್ ವತಿಯಿಂದ ಅರಬ್ಬಿ, ಉರ್ದು, ಇಂಗ್ಲೀಷ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಪರೀಕ್ಷೆ ನಡೆಸಲಾಗಿತ್ತಿತ್ತು ಇನ್ನುಮುಂದೆ ಕನ್ನಡ ಭಾಷೆಯಲ್ಲಿ ಕೂಡಾ ಇದರ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಜಾಮಿಯಾ, ನಿಜಾಮೀಯಾ ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ಪರವಾನಿಗೆ ಲಭಿಸಿದೆ. ಹೆಚ್ಚಿನ ಮಾಹಿತಿಯನ್ನು ಈ  ಪುಸ್ತಕ ಖರೀದಿಸಿ ಸಂಪೂರ್ಣ ಮಾಹಿತಿ ಪಡೆದಕೊಳ್ಳಬಹುದಾಗಿದೆ ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರು ಕೊಪ್ಪಳದ ತಂಜೀಮೇ-ಉಲ್ ಮಾಯೆ ಇಕ್ರಾಮ್- ಅಹೇಲೆ ಸುನ್ನತ್(ರಿ)ಗೆ ಸಂಪರ್ಕಿಸಬಹುದು ಎಂದು ಮುಫ್ತಿ ನಜೀರ್ ಅಹಮ್ಮದ್ ಖಾದ್ರಿ ಮತ್ತು  ಮೌಲಾನಾ ಮುಸ್ತಫಾ ಕಮಾಲ್ ಸಾಹೇಬ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!