ಕುಪ್ಪಳಿಯಲ್ಲಿ ‘ಕನ್ನಡ ಕಮ್ಮಟ’

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗವು ಡಿಸೆಂಬರ್ ೨೯ರಿಂದ ೩೧ರವರೆಗೆ, ಕುಪ್ಪಳಿಯಲ್ಲಿ ‘ಕನ್ನಡ ಕಮ್ಮಟ’ವನ್ನು ನಡೆಸುತ್ತಿದೆ. ಊಟ, ವಸತಿ ಉಚಿತವಿರುತ್ತದೆ. ಇದರಲ್ಲಿ ಕುವೆಂಪು ಆಯ್ದ ಬರಹಗಳನ್ನು ಕುರಿತು ಸಂವಾದ ನಡೆಸಲಾಗುವುದು. ಪದವಿ, ಸ್ನಾತಕೋತ್ತರ ಪದವಿ ಮತ್ತು ೩೦ ವರ್ಷ ಒಳಗಿನ ಸಾಹಿತ್ಯಾಸಕ್ತರು ಡಿಸೆಂಬರ್ ೫ರ ಒಳಗೆ ಸ್ವವಿವರದೊಂದಿಗೆ ಅರ್ಜಿಸಲ್ಲಿಸಲು ಕೋರಿದೆ. ಆಯ್ಕೆಯಾದವರು ೧೦೦ ರೂ. ಶುಲ್ಕದೊಂದಿಗೆ ಕಮ್ಮಟಕ್ಕೆ ಹಾಜರಾಗಬಹುದು. ಸ್ವವಿವರದ ಅರ್ಜಿಗಳನ್ನು ಡಾ. ಬಿ.ಎಂ. ಪುಟ್ಟಯ್ಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ಅಂಚೆ, ಹೊಸಪೇಟೆ, ೫೮೩ ೨೭೬- ಈ ವಿಳಾಸಕ್ಕೆ ಕಳಿಸಲು ಕೋರಿದೆ. ಅಥವಾ drbmputtaiah@gmail.com  ಈ ವಿಳಾಸಕ್ಕೆ ಮೆಯಿಲ್ ಮಾಡಬಹುದು.    
     
  

Leave a Reply