ಗಣತಿಯಲ್ಲಿ ಆದಿಬಣಜಿಗ ಎಂದು ನಮೋದಿಸಲು ದಿವಟರ್ ಕರೆ

ಕೊಪ್ಪಳ,ಎ.೧೪: ಸ್ವಾತಂತ್ರ ಬಂದ ನಂತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಮೀಕ್ಷೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಎ.೧೧ ರಿಂದ ೩೦ ರವರೆಗೆ ನಡೆಯಲಿದ್ದು ಅತ್ಯಂತ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಸಾಮಾಜಿಕ, ಆರ್ಥಿಕ ಸಮಿಕ್ಷೆಯನ್ನು ಪಡೆಯಲು ಬರುವಂತಹ ಗಣತಿದಾರರಿಗೆ ಸಂಪೂರ್ಣ ಸಮರ್ಪಕ ಮಾಹಿತಿ ನೀಡಿ ಸಹಕರಿಸುವ ಮೂಲಕ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಮತ್ತು ಜಾತಿ ಕಾಲಂನಲ್ಲಿ ಆದಿಬಣಜಿಗ ಎಂದು ನಮೋದಿಸುವಂತೆ ಕೊಪ್ಪಳ ಜಿಲ್ಲಾ ಆದಿಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ವೈಜನಾಥ ದಿವಟರ್ ಸಮಾಜ ಭಾಂಧವರಿಗೆ ಕರೆ ನೀಡಿದರು. 
ಅವರು ಸಮಾಜದ ಕಾರ್ಯಾಲಯದಲ್ಲಿ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ, ಪ್ರತಿ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಈ ಸಮಿಕ್ಷೆಯೂ ಅತ್ಯವಶ್ಯವಾಗಿದ್ದು ಇದರ ಜೊತೆಗೆ ಸರಕಾರದಿಂದ ಹಂಚಿಕೆಯಾಗುವ ಅನುದಾನಗಳಿರಬಹುದು, ಮಿಸಲಾತಿಯು ಯಾವ ಪ್ರಮಾಣದಲ್ಲಿ ಹಂಚಿಕೆಯಾಗಬೇಕು ಎಂಬ ನಿಖರವಾದ ಅಂಕಿ ಅಂಶಗಳು ಸಿಗಲಿದ್ದು ಇದರಿಂದ ದೇಶದಲ್ಲಿ ಸಮಾನತೆಯನ್ನು ತರಲೂ ಅನುಕೂಲವಾಗುತ್ತದೆ ಆದ್ದರಿಂದ ಗಣತಿದಾರರಿಗೆ ತಮ್ಮ ನಿಖರವಾದ ಮಾಹಿತಿ ನೀಡುವುದರ ಮೂಲಕ ಜಾತಿ ಕಾಲಂನಲ್ಲಿ ಆದಿಬಣಜಿಗ  ಎಂದೇ ನಮೋದಿಸಲು ಸಮಾಜದ ಮುಖಂಡರಲ್ಲಿ ಚರ್ಚೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. 
ಸಭೆಯಲ್ಲಿ ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ ಹುಬ್ಬಳ್ಳಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಗಣತಿ ಕಾರ್ಯದಲ್ಲಿ ವಿವರಣೆ ಪಡೆಯಲು ಗಣತಿದಾರರು ತಮ್ಮ ಮನೆಗೆ ಬಂದಾಗ ಮಹತ್ವ ಪೂರ್ಣವಾದ ಮಾಹಿತಿ ನೀಡಿ, ಅನ್ಯರ ಮಾತಿಗೆ ಕಿವಿಗೊಡದೇ ಕಾಲಂ ೫ ರಲ್ಲಿ ಧರ್ಮ ಹಿಂದೂ ಎಂದು ಕಾಲಂ ೬ ರಲ್ಲಿ ಜಾತಿ ಆದಿಬಣಜಿಗ ಎಂದು ನಮೋದಿಸುವ ಮುಖಾಂತರ ನಮ್ಮ ಸಮಾಜಕ್ಕೆ ಸಿಗಬೇಕಾದಂತಹ ಸರಕಾರಿ ಸೌಲತ್ತುಗಳನ್ನು ನಿಖರವಾದ ಮಾಹಿತಿಗಳನ್ನು ನೀಡುವ ಮೂಲಕ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಸಿದ್ಧಪ್ಪ ಬಡ್ನಿ, ಬಸಪ್ಪ ದಿವಟರ್ ಕುಕನೂರು, ಯಲ್ಲಪ್ಪ ಉಮಚಗಿ, ಯಲ್ಲಪ್ಪ ಕಾಟ್ರಳ್ಳಿ, ಮಂಜುನಾಥ ಎಮ್. ದಿವಟರ್, ಡಿ.ಎಸ್. ದ್ಯಾಬೇರಿ, ರಮೇಶ ಆದಿ ಗುನ್ನಳ್ಳಿ, ಬಿ.ಕೆ. ದಿವಟರ್. ವಿರುಪಾಕ್ಷಪ್ಪ ಮುರಳಿ, ಬಸವರಾಜ ದಿವಟರ್ ಕುಕನೂರು, ಬಸವರಾಜ ದೇವಣ್ಣನವರ ಹನುಮಸಾಗರ, ಈಶಪ್ಪ ಗದ್ದಿ, ಸಾಹೇಬಗೌಡ ಅಳಿಮನಿ, ಶರಣಪ್ಪ ಗದ್ದಿ ಹನುಮಸಾಗರ, ಆದಪ್ಪ ಕುಷ್ಟಗಿ, ಶರಣಪ್ಪ ದಿವಟರ್ ಕಾರಟಗಿ, ಶಿವಪ್ಪ ಜೋಗಿನ್, ವಿರೇಶ ಕುಕನೂರು, ಚಂದ್ರು ದಿವಟರ್, ರಮೇಶ ಉಮಚಗಿ, ಜಿಲ್ಲಾ ಕಾರ್ಯದರ್ಶಿ ಪರಮಾನಂದ ಯಾಳಗಿ ಇನ್ನಿತರರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment