fbpx

ಇಂದು ಹಿರೇವಂಕಲಕುಂಟಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ.


ಯಲಬುರ್ಗಾ-  ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಕೊಪ್ಪಳ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ, ಹುಬ್ಬಳ್ಳಿಯ ಖಾತ್ಯ ನೇತ್ರ ತಜ್ಞ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ವಿನಾಯಕ ಆಪ್ಟಿಕಲ್ಸ್ ಅವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹಿರೇವಂಕಲಕುಂಟಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅ.೩ ರಂದು ಬೆಳಗ್ಗೆ ೧೦ ಗಂಟೆಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು  ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಸಜ್ಜನ್ ಉದ್ಘಾಟಿಸುವರು. ಡಾ.ಗಂಗಾಧರ ಮೇಟಿ ಆಡಳಿತ ವೈಧ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಹಿರೇವಂಕಲಕುಂಟಿ ಇವರು ಕಾರ್ಯಕ್ರಮದ ಅಧ್ಯಕ್ಷತವಹಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ,ಶ್ರೀಕಾಂತ ಬಾಸೂರ, ಹುಬ್ಬಳ್ಳಿಯ ಹಿರಿಯ ಖಾತ್ಯ ನೇತ್ರ ತಜ್ಞ ಡಾ.ಎಂ.ಎಂ ಜೋಷಿ, ಜಿಲ್ಲಾ ಅಂಧತ್ವ ನಿವಾರಣಾ ಸಂಘದ ವ್ಯವಸ್ಥಾಪಕ ಡಾ. ಎಸ್.ಕೆ ದೇಸಾಯಿ,  ಸಿ.ಎಮ್ ಹಿರೇಮಠ ತಾಲೂಕು ಆರೋಗ್ಯ ಅಧಿಕಾರಿಗಳು ಯಲಬುರ್ಗಾ, ಬೇವೂರ ಪಿ.ಎಸ್.ಐ ಶಿವರಾಜ ಎಸ್.ಐ, ಜಿ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದಗೌಡ ಎಸ್ ಪಾಟೀಲ್, ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ, ತಾಲೂಕು ಪಂಚಾಯ್ತಿ ಸದಸ್ಯೆ ಜಯಶ್ರೀ ರಮೇಶ ವಾಲ್ಮೀಕಿ, ಗ್ರಾ.ಪಂ ಉಪಾಧ್ಯಕ್ಷ ಸುಬಾಸ ಜರ್ಲಿ, ಪ್ರಾ.ಕೃ.ಪ.ಸ.ಸ.ನಿ ಅಧ್ಯಕ್ಷೆ ಗೌರಮ್ಮ ಕುಂಟೆಪ್ಪ ಹೂನೂರ, ಅಡಿವೆಪ್ಪಗೌಡ್ರ ಪಾಟೀಲ್, ಲಿಂಗಣ್ಣ ಹರ್ಲಾಪೂರ, ಮಾಜಿ ಗ್ರಾ.ಪಂ ಅಧ್ಯಕ್ಷ ವಿರೇಶ ಕಾಯಿ  ಮಾಜಿ ತಾ.ಪಂ ಸದಸ್ಯ ಮಲ್ಲಿಕಾರ್ಜುನ ಹರ್ಲಾಪೂರ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ವಿನಾಯಕ ನೇತ್ರ ಸೇವಾ ಸಂಸ್ಥೆ ಉಪಾಧ್ಯಕ್ಷ ಚಂದ್ರಶೇಖರ ಉತ್ತಂಗಿ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!