ಗಂಗಾವತಿಯಲ್ಲಿ ೩ ನೇ ರಾಜ್ಯ ದಲಿತ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಕೊಪ್ಪಳ, ಮೇ. ೧೪. ದಲಿತ ಸಾಹಿತ್ಯ ಪರಿಷತ್ ನಿಂದ ನಡೆಯುವ ೩ ನೇ ರಾಜ್ಯ ಸಾಹಿತ್ಯ ಸಮ್ಮೇಳನ ಜೂನ್ ೧೧ ಮತ್ತು ೧೨ ರಂದು ಗಂಗಾವತಿಯಲ್ಲಿ ನಡೆಯಲಿದೆ ಎಂದು ಕೊಪ್ಪಳ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.
ಕನಾರ್ಟಕ ರಾಜ್ಯಾದ್ಯಂತ ಕಾರ್ಯ ಮಾಡುತ್ತಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರ ನೇತೃತ್ವದಲ್ಲಿ ಮೇ ೧೭ ರಂದು ಮಧ್ಯಾಹ್ನ ೪ ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ ಆದ್ದರಿಂದ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ. ಅನಿರೀಕ್ಷಿತವಾಗಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಈ ಸಮ್ಮೇಳನ ಮಾಡುವ ಅವಕಾಶ ಬಂದಿರುವದು ಸಂತಸ ತಂದಿದೆ, ಕಾರಣ ಸಮ್ಮೇಳನದ ಸಿದ್ಧತೆ ಕಾರ್ಯ ನಡೆದಿದ್ದು ಸಾಹಿತಿಗಳು, ಚಿಂತಕರು, ಜನಪ್ರತಿನಿಧಿಗಳು ಸೂಕ್ತ ಮಾರ್ಗದರ್ಶನ ಸಹಾಯ ಸಹಕಾರ ನೀಡಬೇಕೆಂದು ಮಂಜುನಾಥ ಗೊಂಡಬಾಳ ಪ್ರಕಟಣೆಯಲ್ಲಿ ಕೋರಿದ್ದಾರೆ.

Please follow and like us:
error