ಆ.೨೪ ರಂದು ಕೊಪ್ಪಳ ಜಿಲ್ಲಾ ಉತ್ಸವ

ಕೊಪ್ಪಳ ಜುಲೈ ೧೪: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ೫ನೇ ಬಾರಿಗೆ ಬರುವ ಆಗಷ್ಟ್ ೨೪, ೨೫ ಹಾಗೂ ೨೬ ರಂದು ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಉತ್ಸವವನ್ನು ನಗರದ ಸಾಹಿತ್ಯಭವನದಲ್ಲಿ ಆಯೋಜಿಸಲಾಗಿದೆ.
ಕಳೆದ ಒಂದು ದಶಕದಿಂದಲೂ ಕೊಪ್ಪಳ ನಾಗರಿಕರ ವೇದಿಕೆಯು ಜಿಲ್ಲೆಯಾದ್ಯಂತ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ೫ನೇ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸಾಮಾನ್ಯ ಜ್ಞಾನ ಸ್ಪರ್ಧೆ ಹಾಗೂ ವೈವಿಧ್ಯಮಯ ನೃತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು.
ರಾಜ್ಯದ ವಿವಿಧ ಜಿಲ್ಲೆಗಳಿಂದ ೪೦ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಕವಿ ಗೋಷ್ಠಿ, ಹೈದರಾಬಾದ ಕರ್ನಾಟಕದ ಸ್ಥಿತಿ-ಗತಿ ಕುರಿತು ಸಂವಾದ, ಮಕ್ಕಳ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲೆಯ ಪ್ರತಿಭಾವಂತ ಯುವ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕಲಾ ತಂಡಗಳು ಮೊ. ೯೮೪೫೩೩೮೧೬೦, ೯೨೪೨೮೬೩೦೫೦, ೯೪೪೮೦೨೫೦೬೭ ಹಾಗೂ ೯೪೪೯೧೫೪೦೨೮ ನ್ನು ಸಂಪರ್ಕಿಸಲು ಕೋರಲಾಗಿದೆ.

Please follow and like us:
error