ಕಾಂಗ್ರೆಸ ಪಕ್ಷಕ್ಕೆ ಗೆಲುವು ನಿಶ್ಚಿತ ಗವಿಶಿದ್ದಪ್ಪ ಮುದಗಲ್

ಕೊಪ್ಪಳ : ದಿನಾಂಕ ೧೪-೦೯-೨೦೧೧ ರಂದು ಕೊಪ್ಪಳದ ಶಿದ್ದೇಸ್ವರ ನಗರ, ಗವಿಶಿದ್ದೇಶ್ವರ ಹಮಾಲರ ಸಂಘದಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿಯಾದ ಕೆ. ಬಸವರಾಜ ಹಿಟ್ನಾಳರವರು ಮತಯಾಚನೆ ಮಾಡಿದರು ಈ ಸಂಧರ್ಬದಲ್ಲಿ ನಗರದ ಮತದಾರರಿಂದ ಬಾರಿ ಬೆಂಬಲ ವ್ಯಕ್ತವಾಗಿದ್ದು ಕಾಂಗ್ರೆಸ ಪಕ್ಷವು ಕೊಪ್ಪಳದ ಉಪಚುನಾವಣೆಯಲ್ಲಿ ಪ್ರಚಂಡ ಬಹುಮತವನ್ನು ಪಡೆದು ಕಾಂಗ್ರೆಸ ಪಕ್ಷ ಜಯಬೇರಿ ಬಾರಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಗವಿಶಿದ್ದಪ್ಪ ಮುದಗಲ್ ರವರು ಬಷ್ಟ ಬಿಜೆಪಿ ಸರಕಾರ ಅಧಿಕಾರದ ಮೊದಲದಿನಗಳಲ್ಲಿ  ಜಮೀನು, ಜಮೀನು ಅಂತಿದ್ದ ಸಚಿವರು ಇಂದು ಜಾಮೀನು, ಜಾಮೀನು ಎಂದು ಚಡಪಡಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಕೈ ಗೊಂಬೆಯಾಗಿರುವ ಸದಾನಂದ ಗೌಡರು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಕರ್ನಾಟಕ ವಿದಾನಸಭಾ ಅದಿವೇಶನ ಕರೆಯುವ ಕೆಲಸಮಾಡಿ, ನಂತರ ಕಾಂಗ್ರೆಸ ಪಕ್ಷದ ಬಗ್ಗೆ ಮಾತನಾಡಲಿ ಎಲ್ಲಾ ಕ್ಷೇತ್ರಗಳಿಂದ ಆಡಳಿತ ವಿಫಲಗೊಂಡು  ರಾಜ್ಯದಲ್ಲಿ ಬ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಬಿಜೆಪಿ ಸರಕಾದ ವಿರುದ್ದಕಿಡಿಕಾರಿದರು. 
ಮತಯಾಚನೆ ಸಂದರ್ಭದಲ್ಲಿ  ಎಸ್.ಬಿ ನಾಗರಳ್ಳಿ, ಮರ್ಧಾನಲಿ ಅಡ್ಡೆವಾಲಿ, ಹೆಚ್. ಎಲ್ ಹಿರೇಗೌಡರ, ಜುಲ್ಲು ಖಾದರ್, ಅಮ್ಮಜದ ಪಟೇಲ, ಜಾಖಿರ ಹುಸೇನ ಕಿಲ್ಲೇದಾರ, ಮಾನ್ವಿ ಪಾಷಾ, ಕಾಟನ್ ಪಾಷ, ಖಾದ್ರಿ, ಗವಿಶಿದ್ದಪ್ಪ ಕಂದಾರಿ, ಶಿವಾನಂದ ಹುದ್ಲೂರ, ಅಪ್ಸರಸಾಬ್, ವಿರುಪಾಕ್ಕಪ್ಪ ಕಟ್ಟಿಮನಿ ವಕೀಲರು ಇನ್ನು ಅನೇಕ ಕಾರ್ಯಕತ್ರರು ಉಪಸ್ಥಿತರಿದ್ದರುಎಂದು ಪತ್ರಿಕಾಪ್ರಕಟಣೆಯಲ್ಲಿ ತಾಲೂಕ ವಕ್ತಾರ ಅಕ್ಬರಪಾಷ ಪಲ್ಟನ್ ತಿಳಿಸಿದರು.
Please follow and like us:
error