ಎಡ್ಸ ಜಾಗೃತಿ ಅಭಿಯಾನ.

ಕೊಪ್ಪಳ-08- ಏಡ್ಸ ಎಂಬ ಮಹಾಮಾರಿ ರೋಗಕ್ಕೆ ಹದಿಹರೆಯದ ವಯಸ್ಸಿನಲ್ಲಿ ಯುವಕರು ಏಡ್ಸ ರೋಗಕ್ಕೆ ಬಲಿಯಾಗುತ್ತಿರುವದು ವಿಷಾದನೀಯ ಎಂದು ರಾಷ್ಟ್ರೀಯ ಸೇವಾ ಯೊಜನೆ ಮುಖ್ಯಾಧಿಕಾರಿ ಹಾಗೂ ಕಾನೂನು ಮಹಾವಿದ್ಯಾಲಯದ ಉಪನ್ಯಾಸ ಬಸವರಾಜ ಎಸ್.ಎಂ ವಿಷಾದ ವ್ಯಕ್ತ ಪಡಿಸಿದರು.
ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ನೆಡದ ಎಡ್ಸ್ ತಡೆಗಟ್ಟುವಿಕೆ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಚ್‌ಐವಿ ರೋಗಗ್ರಸ್ಥರು ಜಿಲ್ಲೆಯಲ್ಲಿ ಹೋದ ವರ್ಷಗಿಂತ ಈ ವರ್ಷ ನೊಡೊದರೆ ಕಡಿಮೆಯಾಗಿದ್ದಾರೆ ಆದರೆ ಈ ರೋಗಕ್ಕೆ ತುತ್ತಾಗಿರುವದು ಮಕ್ಕಳು ಇರುವದು ಒಂದು ವಿಷಾದನೀಯ ಮಕ್ಕಳಿಗು ಈ ರೋಗ ಬರದೆ ಹಾಗೆ ತಡೆಯಬೇಕಾದರೆ ಎಚ್‌ಐವಿ ಇರುವ ಗರ್ಭಿಣಿಯರು ಗರ್ಭಿಣಿ ಇರುವ ಸಮಯದಲ್ಲಿ ಚುಚ್ಚು ಮದ್ದುಗಳನ್ನು ಕೊಡಿಸಿದರೆ ಈ ರೋಗ ಬರದೆ ಹಾಗೆ ತಡೆಯಬಹುದು ಎಂದ ಅವರು ಎಚ್‌ಐವಿ ಇದ್ದವರು ಯಾವುದೇ ಕಾರಣಕ್ಕೂ 

ಭಯಪಡುವ ಅಗತ್ಯ ವಿಲ್ಲ ಎಡ್ಸ್ ಇದ್ದವರು ಕೂಡ ಮಾನಿಸಿಕವಾಗಿ ಕುಗ್ಗದೆ ಎಲ್ಲರಂತೆ ಬಾಳಿ ಬದಕಬಹುದು ಆದ್ದರಿಂದ ಇರುವಷ್ಟು ವರ್ಷ ಸಂತೋಷದಾಯಕ ಜೀವನ ಕಳೆಯಬಹುದು ಎಂದರು. ನಂತರ ಮಾತನಾಡಿದ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ಮಾತನಾಡಿ ಎಡ್ಸ್ ರೋಗಕ್ಕೆ ರೋಗಿಗಳ ತಪ್ಪಿನಿಂದ ಮಕ್ಕಳು ಈ ರೋಗಕ್ಕೆ ಹೆಚ್ಚು ಬಲಿಯಾಗುತ್ತಿರುವದು ವಿಷಾದನೀಯ ಆದರೆ ಈ ರೋಗವನ್ನು ನಮ್ಮ ದೇಶದಿಂದ ಒಡೆದೊಡಿಸಲು ಯುವಕರ ಪಾತ್ರ ಬಹು ಮುಖ್ಯ ಆದ್ದರಿಂದ ಯುವಕರು ಎಡ್ಸ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಮತ್ತು ಲೈಗಿಂಕ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಎಡ್ಸ ಬಗ್ಗೆ ಜಾಗೃತಿ ಮಾಡುವದನ್ನು ಗ್ರಾಮೀಣ ಪ್ರದೇಶದಲ್ಲಿ ಅಭಿಯಾನ ಮೂಲಕ ಜಾಗೃತಿ ಮುಡಿಸಿಬೇಕು ಜನರಿಗೆ ಅದರಿಂದ ಆಗುವ ಅನಾಹುತಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು. ಎಡ್ಸ ಜಾಗೃತಿ ಅಭಿಯಾನವನ್ನು ಕಾನೂನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಎಡ್ಸನ್ನು ತಡೆಗಟ್ಟಲು ಜನರಿಗೆ ಘೋಷಣೆಗಳನ್ನು ಕೂಗುತ್ತಾ ತಿಳುವಳಿಕೆಯನ್ನು ಮೂಡಿಸುತ್ತಾ ಅಭಿಯಾನವನ್ನು ಕಾಲೇಜಿನಿಂದ ನಗರದ ಪ್ರಮುಖ ನಗರಗಳಲ್ಲಿ  ಸಂಚರಿಸಿ ಜಾಗೃತಿ ಮೂಡಿಸಿ ಬಸ್ ನಿಲ್ದಾಣದ ಹತ್ತಿರ ಅಲ್ಲಿರುವ ಜನರಿಗೆ ಜಾಗೃತಿ ಮೂಡಿಸಿದರು.

Please follow and like us:
error