ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ವನಿತಾ ಗಡಾದ

ಕೊಪ್ಪಳ ಫೆ.೧೪ : ಈಗಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಉತ್ತಮ ಬಂಧವ್ಯ ಹೊಂದಿರಬೇಕು ಎಂದು ಶ್ರೀಮತಿ ವನಿತಾ ಗಡಾದ ಹೇಳಿದರು.
ಅವರು ರವಿವಾರ ಭಾಗ್ಯನಗರ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ಜ್ಞಾನಬಂಧು ಕಿರಿಯ ಪ್ರಾಥಮಿಕ ಶಾಲೆಯ ೩ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ತಮಿಳುನಾಡಿನಲ್ಲಿ ವಿದ್ಯಾರ್ಥಿಯೊಬ್ಬ ಶಿಕ್ಷಕಿಯನ್ನು ಕೊಲೆ ಮಾಡಿದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳ ನೈತಿಕ ಮೌಲ್ಯ ಹೆಚ್ಚಿಸಿ ತಿಳುವಳಿಕೆ ನೀಡಿ ಅವರನ್ನು ಆದರ್ಶ ವಿದ್ಯಾರ್ಥಿಗಳನ್ನಾಗಿ ಮಾಡುವ ಹೊಣೆ  ಶಿಕ್ಷಕರ ಮೇಲಿದೆ ಎಂದರು. ತಮ್ಮ ಮಕ್ಕಳು ಟಿವಿ ನೋಡಿ ಹಾಳಾಗುವುದನ್ನು ತಪ್ಪಿಸಲು ಆಸಕ್ತಿವಹಿಸಬೇಕು ಎಂದು ಪಾಲಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ರಾಘವೇಂದ್ರ ಪಾನಘಂಟಿ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಗ್ರಾಮ ಸೇವಾ ವಿಸ್ವಸ್ಥ ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ಉತ್ತಮ ಸೇವೆ ಮಾಡಿ ೧೦ ವರ್ಷಗಳಲ್ಲಿ ಮಾಡಬೇಕಾದ ಸಾಧನೆಯನ್ನು ಕೇವಲ ೩ ವರ್ಷಗಳಲ್ಲಿ ಮಾಡಿ ತೋರಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಿ ಅಡ್ಡೇದಾರ, ಉಪಾಧ್ಯಕ್ಷ ಶ್ರೀಧರ ಹುರಕಡ್ಲಿ, ತಾ.ಪಂ. ಸದಸ್ಯ ಶ್ರೀನಿವಾಸ ಹ್ಯಾಟಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ, ಜಿ.ಪಂ. ಸದಸ್ಯ ಮಹೇಶ ಹಳ್ಳಿ, ಶಿಕ್ಣ ಸಂಸ್ಥೆಯ ಪ್ರಹ್ಲಾದ ಅಗಳಿ, ಮಹ್ಮದ್ ಅಲಿಮುದ್ದೀನ್, ಶಿವಕುಮಾರ ಕುಕನೂರು, ಪ್ರಾಚಾರ್ಯ ಸಿ.ವಿ. ಜಡಿ, ಉಪ ಪ್ರಾಚಾರ್ಯ ಯಂಕಪ್ಪ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ಸತೀಶ ಮೇಘರಾಜ, ಲಕ್ಷ್ಮಣಸಾ ನಿರಂಜನ, ವಸಂತ ಪವಾರ ಉಪಸ್ಥಿತರಿದ್ದರು.
Please follow and like us:
error