ಹಿರಿಯ ಸಾಹಿತಿಗಳಿಂದ ನಿಂಗೋಜಿ ಪರ ಪ್ರಚಾರ

ಕೊಪ್ಪಳ :- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಬ್ಯರ್ಥಿ ಯಲಬುರ್ಗಾದ  ವೀರಪ್ಪ.ಮಲ್ಲಪ್ಪ ನಿಂಗೋಜಿ ಹಾಗೂ ಕೇಂದ್ರ ಸಮಿತಿಯ ಅದ್ಯಕ್ಷ ಸ್ಥಾನದ ಅಬ್ಯರ್ಥಿ ಪ್ರೋ.ಚಂಪಾರವರ ಪರವಾಗಿ ಜಿಲ್ಲೆಯ ಹಿರಿಯ ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರ, ಹೆಚ್.ಎಸ್.ಪಾಟೀಲ, ಡಾ|| ಕೆ.ಬಿ.ಬ್ಯಾಳಿ, ಮುನಿಯಪ್ಪ ಹುಬ್ಬಳ್ಳಿ, ರವಿತೇಜ ಅಬ್ಬೀಗೆರಿ, ಸಿ.ಹೆಚ್.ನಾರಿನಾಳ,  ಎಸ್.ವಿ.ಪಾಟೀಲ್, ಶಿವಮೂರ್ತಿ ಇಟಗಿ, ಉಮಾ ಶಂಕರ ಹಿರೇಮಠ, ಅಕ್ಬರ ಖಾಲಿಮಿರ್ಚಿ,  ಶಿವಾನಂದ ಹೊದ್ಲೂರ, ಬಸವರಾಜ ಕಟಗೇರಿ,  ಶಿ.ಕಾ.ಬಡೀಗೇರ, ಬಸವರಾಜ ಪಾಟೀಲ, ವಿಜಯಾನಂದ ಗದ್ದಿಕೇರಿ, ಬಸವರಾಜ ಚಿಲವಾಡಗಿ, ಇನ್ನೂ ಮುಂತಾದ ಸಾಹಿತಿಗಳು ನಗರದ ಹಿರಿಯ ಸಾಹಿತಿಗಳಾದ ಎಮ್.ಎಸ್. ಸವದತ್ತಿ, ನಾಗಲಿಂಗಪ್ಪ ಮಲಗಿಹಾಳ, ಡಾ|| ಬಸವರಾಜ ಕುಂಬಾರ,  ವೀರಣ್ಣ ಗಂಗಾವತಿ  ಹಾಗೂ ಇನ್ನಿತರರ  ಆಜೀವ ಸದಸ್ಯರನ್ನು ಕಂಡು ಮತಯಾಚಿಸದರು ಹಾಗೂ ಜಿಲ್ಲೆಯ   ಜಿಲ್ಲೆಯ ಕಿನ್ನಾಳ, ಮಂಗಳೂರ, ಕುದರಿಮೋತಿ, ಹಾಗೂ ನಗರದ ಹಲವಾರು ಕಡೆ ನಿಂಗೋಜಿಯವರಿಗೆ ಮುಕ್ತ ಸಹಕಾರ ನೀಡಿ  ಗೆಲುವಿಗೆ ಸಹಕರಿಸಲಾಗುವುದು ಎಂದು ಭಾವನಾತ್ಮಕವಾಗಿ ಹೇಳಿದರು. 
ಜಿಲ್ಲೆಗೆ  ಚಂಪಾ ಭೆಟಿ –  ಇದೇ ದಿನಾಂಕ ೧೮ ರಂದು ಬೆಳಿಗ್ಗೆ ೧೦:೩೦ ಕ್ಕೆ ರಾಜ್ಯ ಕ.ಸಾ.ಪ ಹಾಗೂ ಜಿಲ್ಲಾ ಕ.ಸಾ.ಪ ಚುನಾವಣೆ ಪ್ರಚಾರರ್ಥ ಕೇಂದ್ರ ಸಮಿತಿಗೆ ಸ್ಪರ್ಧಿಸಿರುವ ಪ್ರೋ. ಚಂಪಾರವರು  ನಗರಕ್ಕೆ   ಆಗಮಿಸಿ ಆಜೀವ ಸದಸ್ಯರನ್ನು ಕಂಡು ನಂತರ ಪತ್ರಿಕಾಗೋಷ್ಠಿ ನಡೆಸುವರೆಂದು ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರ ಹಾಗೂ ಅಕ್ಬರ ಕಾಲಿಮಿರ್ಚಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 
Please follow and like us:
error