ಸಾಹಿತ್ಯ ಭವನವನ್ನು ಕಸಾಪಕ್ಕೆ ಬಿಟ್ಟುಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ : ನೆಲ ಜಲ ಭಾಷೆಗೆ ಹೋರಾಟಮಾಡುವ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಸಾಹಿತ್ಯಭವನಕ್ಕೆ ಮೂಲ ಸೌಲಭ್ಯವನ್ನು ಕಲ್ಪಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಬಿಟ್ಟುಕೊಡಲು ಜಿಲ್ಲಾ ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಜಿಲ್ಲಾ ಕಸಾಪ ಪ್ರಥಮ ಸಭೆಯಲ್ಲಿ ಮೆಲ್ಕಂಡ ನಿರ್ಣಯದ ಜೊತೆಗೆ ಜಿಲ್ಲೆಯಲ್ಲಿ ಆಜೀವ ಸದಸ್ಯರ ಸಭೆ, ವಿಚಾರ ಸಂಕೀರ್ಣ, ಮಾತುಭಾಷೆಯಾದ ಕನ್ನಡದಲ್ಲಿ ೧೦ ನೇ ತರಗತಿಯವರೆಗೆ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡಬೇಕು,  ಪ್ರತಿತಾಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಿಸುವುದು. ದತ್ತಿ ಕಾರ್ಯಕ್ರಮವನ್ನು ನಿಗದಿತ ಸಮಯದಲ್ಲಿ ಮಾಡುವುದು. ಹಾಗೂ ವಿಜಾಪೂgದಲ್ಲಿ ಮುಂಬರುವ ಅಖಿಲ ಭಾರತ ೭೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಚನ ಪಿತಾಮಹಾ ಫ. ಗು. ಹಳಕಟ್ಟಿಯವರ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದ ಸಭೆಯು ಹೈದ್ರಾಬಾದ ಕರ್ನಾಟಕ ವ್ಯಾಪ್ತಿಯ ೩೭೧ ನೇ ಕಲಂ ಜಾರಿಗೆ ತಿದ್ದುಪಡಿ ಮಾಡುವಲ್ಲಿ ಬಳ್ಳಾರಿ ಜಿಲ್ಲೆಯನ್ನು ಒಳಪಡಿಸಲು ಸಭೆಯು ನಿರ್ಣಯ ಕೈಗೊಂಡಿತು.
ಕಸಾಪ ಜಿಲ್ಲಾಧ್ಯಕ್ಷರಾದ ವೀರಣ್ಣ ನಿಂಗೋಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಅಕ್ಬರ. ಸಿ. ಕಾಲಿಮಿರ್ಚಿ, ಶಿವಾನಂದ ಮೇಟಿ, ಕೋಶಾಧ್ಯಕ್ಷ ಎಸ್.ಆರ್. ಸರಗಣಾಚಾರ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದ

Related posts

Leave a Comment