fbpx

ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ಉತ್ತಮ ಸಾಧನೆ

ದಿನಾಂಕ : ೭ & ೮ನೇ ಜುಲೈ ೨೦೧೨ ರಂದು ಬಾಗಲಕೋಟೆ ಜಿಲ್ಲಾ ಇಲಕಲ್ ನಗರದಲ್ಲಿ ಎರಡನೇ ರಾಜ್ಯಮಟ್ಟದ ಅಶೀ ಟೆ-ಡು ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕೊಪ್ಪಳದ ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಸಿನಿಯರ್ ವಿಭಾಗದ ೫೧-೫೫ ಕೆಟಗರಿಯಲ್ಲಿ ಮಂಜುನಾಥ ಹೆಚ್.ಜಿ. ಪ್ರಥಮ ಹಾಗೂ ಮಹಂತೇಶ ಎಮ್. ದ್ವಿತೀಯ ಹಾಗೂ ೪೬-೫೦ ಕೆಟಗರಿಯಲ್ಲಿ ರಾಘು ಬಿ. ಮದಕಟ್ಟಿ ಪ್ರಥಮ ಮತ್ತು ರಾಕೇಶ ದ್ವಿತೀಯ ಜೂನಿಯರ್ ವಿಭಾಗದಲ್ಲಿ ೩೧-೩೬ ಕೆಟಗರಿಯಲ್ಲಿ ಶಿವಶಂಕರ್ ಪಿ. ಪಾಟೀಲ್ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ ಮತ್ತು ಈರಣ್ಣ ಕೊಪ್ಪಳ , ಸಂತೋಷ ರಾಠೋಡ್ ಮಹಂತೇಶ ಬೀಳಗಿ, ಲಕ್ಷ್ಮಣ ಗೌಡರವರು ಈ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನಿರ್ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟೇಲರ್ ಹಾಗೂ ಕಾರ್ಯದರ್ಶಿಗಳಾದ ಚಂದ್ರಶೇಖರ ವ್ಹಿ. ಹಂಚಿನಾಳ ಅಭಿನಂದಿಸಿದ್ದಾರೆಂದು ತರಬೇತುದಾರರಾದ ಈರಣ್ಣ ಬಿ. ಕೊಪ್ಪಳ ರವರು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!