fbpx

ಜಿಲ್ಲಾ ಬಿ,ಜೆ.ಪಿ ಮಹಿಳಾ ಮೋರ್ಚದಿಂದ ಪ್ರತಿಭಟನೆ

  ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೂರ್ಚ ವತಿಯಿಂದ ರಾಷ್ಟ್ರದಲ್ಲಿ ನಿರಂತರ ಮಹಿಳೆಯರ ಮೇಲೆ ಅತ್ಯಾಚಾರ, ದೌಜ್ಯರ್ನವನ್ನು ಖಂಡಿಸಿ ದಿ  ೧೬  ರಂದು ಬೆಳಿಗ್ಗೆ ೧೧ ಗಂಟೆಗೆ ಕಿನ್ನಾಳ ರಸ್ತೆಯಲ್ಲಿರುವ ಬಿ.ಜೆ.ಪಿ ಜಿಲ್ಲಾ ಕಾರ್ಯಲಯದಿಂದ ಅಶೋಕ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. 
ಇದರಲ್ಲಿ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕರಾದ ಸಂಗಣ್ಣ ಕರಡಿ, ಸಂಸದರಾದ ಶಿವರಾಮಗೌಡ, ವಿಧಾನ ಪರೀಷತ್ತ ಸದಸ್ಯರಾದ ಹಾಲಪ್ಪ ಆಚಾರ್, ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಜಿಲ್ಲಾ ಬಿ.ಜೆ.ಪಿ ಮುಖಂಡರು ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷರಾದ ಹೇಮಲತಾ ನಾಯಕ ಮಹಿಳಾ ಮುಖಂಡರಾದ ಪದ್ಮಾವತಿ ಕೊತ್ತಂಪಲ್ಲಿ, ಶಾಮಲಾ ಕೋಮಲಾಪೂರ, ಹೆಮಕ್ಕ ಮಂಗಳೂರು, ವೇದಾ ಜೋಷಿ, ಮಧುರಾಕೈ, ಸುಜಾತ ಗೊರ್ಲೆಕೊಪ್ಪ, ಬಿ.ಜೆ.ಪಿ ಯ ಎಲ್ಲಾ ಮೋರ್ಚಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಕ್ಷದ ಮುಖಂಡರು ವಿದ್ಯಾರ್ಥಿನಿಯರು/ ವಿದ್ಯಾರ್ಥಿಗಳು, ಎಲ್ಲಾ ಸಂಘಟನೆಗಳ ಸದಸ್ಯರು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಬಿ.ಜೆ.ಪಿ ಜಿಲ್ಲಾ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ. ಕೋರಿದ್ದಾರೆ.  
Please follow and like us:
error

Leave a Reply

error: Content is protected !!