ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸಿ- ಬೀರಪ್ಪ ಅಂಡಗಿ ಚಿಲವಾಡಗಿ.

ಕೊಪ್ಪಳ-27- ಇಂದಿನ ಯುಗ ಸ್ಪರ್ಧಾತ್ಮಕ ಯುಗವಾಗಿದ್ದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ಬೆಳೆಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ತಾಲೂಕಿನ ಇಂದರಗಿ ಗ್ರಾಮದಲ್ಲಿರುವ ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ೬ನೇ ವಾರ್ಷಿಕೊತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಗುವಿನ ಸರ್ವತೋಮುಖ ಪ್ರಗತಿಯಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರದ ಕುರಿತು ಮಾತನಾಡುತ್ತ,ಪ್ರಸ್ತುತ್ತ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೇ ಏರ್ಪಟಿದ್ದು,ಸ್ಪರ್ಧೇಗೆ ತಕ್ಕಂತೆ ಮಕ್ಕಳ ತಯಾರಾಗಲು ಅವರಿಗೆ ಸ್ಪರ್ಧೇ ಮಾಡುವ ಮನೋದೋರಣೆಯನ್ನು ಶಿಕ್ಷಕರು ಹಾಗೂ ಪಾಲಕರು ಬೆಳೆಸಬೇಕು ಅಂದಾಗ ಮಾತ್ರ ಮಕ್ಕಳ ತಮ್ಮ ಕ್ಷೇತ್ರದಲ್ಲಿ ಸಫಲತೆಯನ್ನು ಹೊಂದಲು ಸಾಧ್ಯವಾಗುತ್ತದೆ.ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳು ನಶಿಸಿ ಹೊಗುತ್ತಿರುವುದು ಬಹಳ ವಿಷಾದನೀಯ ಸಂಗತಿಯಾಗಿದೆ.ಪ್ರತಿಯೊಬ್ಬರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕು.ಅಂದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ.ಮಕ್ಕಳ ಶೈಕ್ಷಣಿಕ ಪ್ರತಿಯಲ್ಲಿ ತಾಯಿಯ ಪಾತ್ರ ಬಹಳ ಮಹತ್ವದಾಗಿದೆ.ಮಹಿಳೆಯರು ದೂರದರ್ಶನದಲ್ಲಿ ಪ್ರಸಾರವಾಗಲಿರುವ ಧಾರವಾಯಿಗಳಿಗೆ ನೀಡುವ ಸಮಯವನ್ನು ಮಕ್ಕಳ ಪ್ರಗತಿಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹಾಲವರ್ತಿಯ ಜಡೇಸ್ವಾಮಿ ಮಠದ ಬಸವರಾಜೇಂದ್ರ ಸ್ವಾಮೀಜಿ ಮಾತನಾಡುತ್ತ,ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ ಅವರಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು.ಪ್ರಾಥಮಿಕ ಹಂತದಲ್ಲಿ ನೀಡಲಾಗುವ ಶಿಕ್ಷಣ ತುಂಬಾ ಮಹತ್ವದಾಗಿದೆ.ಸಮಾಜದ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರವು ಕೂಡಾ ಮಹತ್ವದಾಗಿದೆ.ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಶಿಕ್ಷಕರಾದ ಈರಪ್ಪ ಚಕ್ರಸಾಲಿ ಮಾತನಾಡಿದರು. ವರದಿವಾಚವನ್ನು  ಮುಖ್ಯೋಪಾಧ್ಯಾಯಿನಿ ಅಂಜನಾದೇವಿ ಕೊಳ್ಳಿ ನಿರ್ವಹಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಹನುಮಂತಪ್ಪ ಕೊಳ್ಳಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರ,ಇಂದರಗಿ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಬೀಮಶೇನ ಬಡಿಗೇರ,ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವೀರಭದ್ರಯ್ಯಾ ಪೂಜಾರ,ಶಿಕ್ಷಕರಾದ ಶ್ರೀಧರ.ಎಚ್,ಸಂಸ್ಥೆಯ ಕಾರ್ಯದರ್ಶಿ ಇಂದ್ರೇಶ ಕೊಳ್ಳಿ,ರಮೇಶ ಹೊಳೆಯಾಚೆ,ಮುಂತಾದವರು ಹಾಜರಿದ್ದರು
ಕಾರ್ಯಕ್ರಮವನ್ನು ಶಿಕ್ಷಕರಾದ ಬೆಟ್ಟದೇಶ ಕುಂಬಾರ ನಿರೂಪಿಸಿದರು.  ಶಿಕ್ಷಕರಾದ ರವಿ.ಎನ್ ಸ್ವಾಗತಿಸಿ  ,ಪುಪ್ಪಾ ಎಚ್. ವಂದಿಸಿದರು.

Please follow and like us:
error